ಈ ಪರಿಶೋಧನೆಗಳು ಮತ್ತು ಇತ್ತೀಚಿಗೆ ಸಂಭವಿಸಿದ ಕೆಲ ಅಪಘಾತಗಳಿಗೆ ಸಂಬಂಧಿಸಿದಂತೆ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ‘ಅಕೌಂಟೆಬಲ್ ಮ್ಯಾನೇಜರ್’ಗೆ ಎಚ್ಚರಿಕೆ ನೀಡಲಾಗಿದೆ. ಇಬ್ಬರು ಪ್ರಮಾಣೀಕೃತ ‘ಫ್ಲೈಯಿಂಗ್ ಇನ್ಸ್ಟ್ರಕ್ಟರ್’ಗಳನ್ನು (ಸಿಎಫ್ಐ) ಒಂದು ವರ್ಷದ ಮಟ್ಟಿಗೆ ಅಮಾನತುಗೊಳಿಸಲಾಗಿದೆ. ಅಲ್ಲದೆ ಇತರ ಇಬ್ಬರು ಸಿಎಫ್ಐಗಳಿಗೆ ಮೂರು ತಿಂಗಳು, ಒಬ್ಬರು ಉಪ ಸಿಎಫ್ಐಗೆ ಒಂದು ವರ್ಷ, ಇಬ್ಬರು ಉಪ ಸಿಎಫ್ಐಗಳಿಗೆ ಮೂರು ತಿಂಗಳು, ಒಬ್ಬರು ಸಹಾಯಕ ‘ಫ್ಲೈಯಿಂಗ್ ಇನ್ಸ್ಟ್ರಕ್ಟರ್’ಗೆ ಮೂರು ತಿಂಗಳು ಮತ್ತು ಒಬ್ಬ ವಿದ್ಯಾರ್ಥಿಯನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.