ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಕಲಾವಿದರಿಗೆ ನಿಷೇಧ | ಇಷ್ಟೊಂದು ಸಂಕುಚಿತ ಮನೋಭಾವ ಬೇಡ: ಸುಪ್ರೀಂ ಕೋರ್ಟ್

ಪಾಕ್ ಕಲಾವಿದರನ್ನು ನಿಷೇಧಿಸುವಂತೆ ಕೋರಿದ್ದ ಅರ್ಜಿ ವಜಾ
Published 28 ನವೆಂಬರ್ 2023, 13:29 IST
Last Updated 28 ನವೆಂಬರ್ 2023, 13:29 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದ ಕಲಾವಿದರು ಭಾರತದಲ್ಲಿ ಪ್ರದರ್ಶನ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ. ಜೊತೆಗೆ, ‘ಇಷ್ಟು ಸಂಕುಚಿತ ಮನೋಭಾವ ಹೊಂದಿರಬಾರದು’ ಎಂದು ಅರ್ಜಿದಾರರಗೆ ಕಿವಿಮಾತು ಹೇಳಿದೆ.

ಅರ್ಜಿದಾರ ಫಾಯಿಸ್‌ ಅನ್ವರ್‌ ಖುರೇಶಿ ಅವರು ಇದೇ ವಿಚಾರಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿತ್ತು. ಸಾಂಸ್ಕೃತಿಕ ಸೌಹಾರ್ದ, ಒಗ್ಗಟ್ಟು ಮತ್ತು ಶಾಂತಿ ಸ್ಥಾಪಿಸುವ ಪ್ರಯತ್ನಕ್ಕೆ ಹಿನ್ನೆಡೆ ಉಂಟುಮಾಡುವಂಥ ಪ್ರಯತ್ನ ಇದಾಗಿರುವ ಕಾರಣ ಈ ಅರ್ಜಿಗೆ ಯಾವುದೇ ಮಹತ್ವ ಇಲ್ಲ ಎಂದು ಹೈಕೋರ್ಟ್‌ ಹೇಳಿತ್ತು.

ಹೈಕೋರ್ಟ್‌ನ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಎಸ್‌ವಿಎನ್‌ ಭಟ್ಟಿ ಅವರಿದ್ದ ನ್ಯಾಯಪೀಠ ಹೇಳಿದೆ. 

‘ಆದೇಶ ಹೊರಡಿಸುವ ವೇಳೆ ಅರ್ಜಿದಾರರ ಕುರಿತು ಹೈಕೋರ್ಟ್‌ ಮಾಡಿದ್ದ ಟೀಕೆಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಜೊತೆಗೆ, ಕಲಾವಿದರ ಮೇಲೆ ನಿಷೇಧ ಹೇರುವುಂತೆ ನೀವು ಒತ್ತಾಯಿಸುವಂತಿಲ್ಲ’ ಎಂದೂ ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT