ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಎಡಪಂಥೀಯ ನಾಯಕಿಯರಿಗೆ ಜಾಲತಾಣಗಳಲ್ಲಿ ಬೆದರಿಕೆ–ಡಿವೈಎಫ್‌ಐ ಆರೋಪ

Published 2 ಮೇ 2024, 15:35 IST
Last Updated 2 ಮೇ 2024, 15:35 IST
ಅಕ್ಷರ ಗಾತ್ರ

ತಿರುವನಂತಪುರ: ಕಾಂಗ್ರೆಸ್‌ ಬೆಂಬಲಿತ ‘ಅರಾಜಕ ಗುಂಪೊಂದು’ ಎಡಪಕ್ಷಗಳ ಮಹಿಳಾ ರಾಜಕಾರಣಿಗಳನ್ನು ಸೈಬರ್‌ ಮೂಲಕ ಪೀಡಿಸುವ, ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಸಿಪಿಎಂನ ಯುವ ವಿಭಾಗ ಡೆಮಾಕ್ರಟಿಕ್‌ ಯೂಥ್ ಫೆಡರೇಷನ್‌ ಆಫ್‌ ಇಂಡಿಯಾ (ಡಿವೈಎಫ್‌ಐ) ಗುರುವಾರ ಆರೋಪಿಸಿದೆ.

‘ಸಿಪಿಎಂನ ಹಿರಿಯ ನಾಯಕಿ ಹಾಗೂ ಶಾಸಕಿ ಕೆ.ಕೆ.ಶೈಲಜಾ, ತಿರುವನಂತಪುರ ಮೇಯರ್ ಆರ್ಯಾ ರಾಜೇಂದ್ರನ್‌ ಅವರೊಂದಿಗೆ ಕಾಂಗ್ರೆಸ್‌ ಮತ್ತು ಯೂಥ್‌ ಕಾಂಗ್ರೆಸ್‌ ಬೆಂಬಲಿಗರು ಸೈಬರ್‌ ವೇದಿಕೆಗಳಲ್ಲಿ ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾರೆ’ ಎಂದು ಡಿವೈಎಫ್‌ಐ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಎ.ಎ.ರಹೀಮ್‌ ಆರೋಪಿಸಿದ್ದಾರೆ.

‘ಮಹಿಳಾ ರಾಜಕಾರಣಿಗಳ ಮೇಲೆ ಈ ರೀತಿ ದಾಳಿ ನಡೆಸುವುದು ಕೇರಳದ ಸಂಸ್ಕೃತಿಗೆ ವಿರುದ್ಧವಾದುದು’ ಎಂದೂ ಅವರು ಕಿಡಿಕಾರಿದ್ದಾರೆ.

ಈ ಆರೋಪಗಳಿಗೆ ಕಾಂಗ್ರೆಸ್‌ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಿರುವನಂತಪುರದಲ್ಲಿ ಕಳೆದ ವಾರ ರಾಜ್ಯ ಸಾರಿಗೆ ಬಸ್‌ವೊಂದನ್ನು ತಡೆದಿದ್ದ ಮೇಯರ್‌ ಆರ್ಯಾ ರಾಜೇಂದ್ರನ್, ಬಸ್‌ ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾಲತಾಣಗಳಲ್ಲಿ ಟೀಕೆಗಳನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಹೀಮ್‌ ಈ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT