ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಗುರುವಾರ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸತತ ಎರಡನೇ ಅವಧಿಗೆ ವಿದೇಶಾಂಗ ಖಾತೆ ಗಿಟ್ಟಿಸಿಕೊಂಡ ನಂತರದ ಮೊದಲ ದ್ವಿಪಕ್ಷೀಯ ಭೇಟಿಯ ಪ್ರವಾಸ ಇದಾಗಿದೆ.

‘ಜೈಶಂಕರ್ ಅವರ ಶ್ರೀಲಂಕಾ ಪ್ರವಾಸವು ‘ನೆರೆಯವರೇ ಮೊದಲು’ ಎಂಬ ಭಾರತದ ನೀತಿಯ ಭಾಗವಾಗಿದೆ. ಉಭಯರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯದ ಪ್ರತೀಕವಾಗಿದೆ. ಭೇಟಿಯ ವೇಳೆ ಜೈಶಂಕರ್ ಅವರು ಹಲವು ವಿಚಾರಗಳ ಕುರಿತಂತೆ ಶ್ರೀಲಂಕಾದ ಉನ್ನತ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಈ ಭೇಟಿಯು ಉಭಯ ರಾಷ್ಟ್ರಗಳ ಸಂಪರ್ಕ ಯೋಜನೆ ಹಾಗೂ ಸಹಕಾರ ಯೋಜನೆಗಳಿಗೆ ವೇಗ ನೀಡಲಿದೆ’ ಎಂದು ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.