ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ: ಬಿಆರ್‌ಎಸ್ ಶಾಸಕ ಮಹಿಪಾಲ್ ರೆಡ್ಡಿ, ಸಹೋದರನ ನಿವಾಸದ ಮೇಲೆ ಇ.ಡಿ ದಾಳಿ

Published 20 ಜೂನ್ 2024, 6:35 IST
Last Updated 20 ಜೂನ್ 2024, 6:35 IST
ಅಕ್ಷರ ಗಾತ್ರ

ಹೈದರಾಬಾದ್‌: ಅಕ್ರಮ ಗಣಿಗಾರಿಕೆ ಸಂಬಂಧ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಆರೋಪದಡಿ ತೆಲಂಗಾಣ ಬಿಆರ್‌ಎಸ್‌ ಶಾಸಕ ಗುಡೇಂ ಮಹಿಪಾಲ್ ರೆಡ್ಡಿ ಮತ್ತು ಅವರ ಸಹೋದರ ಮಧುಸೂದನ್ ರೆಡ್ಡಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು (ಗುರುವಾರ) ದಾಳಿ ನಡೆಸಿದ್ದಾರೆ.

ಮಹಿಪಾಲ್‌ ಪತಂಚೆರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಮಧುಸೂದನ್ ರೆಡ್ಡಿ ಅವರಿಗೆ ಸೇರಿದ ಕಲ್ಲು ಗಣಿಗಾರಿಕೆ ಕಂಪನಿ ಸೇರಿದಂತೆ 7–8 ಕಡೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿದ ಬಳಿಕ ಹಣ ಅಕ್ರಮ ವರ್ಗಾವಣೆ ಕುರಿತು ತನಿಖೆ ನಡೆಯುತ್ತಿದೆ.

ಈ ಪ್ರಕರಣದ ಭಾಗವಾಗಿ ಮಾರ್ಚ್‌ನಲ್ಲಿ ಮಧುಸೂದನ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT