ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ, ತಳಮಟ್ಟದ ನವೋದ್ಯಮಿಗಳೇ ‘ಮನ್ ಕಿ ಬಾತ್‌’ನ ಪ್ರಭಾವಿ ವಿಷಯಗಳು

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ ನಡೆಸಿದ ಸಮೀಕ್ಷೆ
Published 29 ಏಪ್ರಿಲ್ 2023, 13:53 IST
Last Updated 29 ಏಪ್ರಿಲ್ 2023, 13:53 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಶಿಕ್ಷಣ ಮತ್ತು ದೇಶದ ತಳಮಟ್ಟದ ನವೋದ್ಯಮಿಗಳ ಅತ್ಯಂತ ಪ್ರಭಾವ ಬೀರಿದ ವಿಷಯಗಳಾಗಿವೆ’ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (ಐಐಎಂಸಿ) ತನ್ನ ಸಮೀಕ್ಷೆಯಲ್ಲಿ ಕಂಡುಕೊಂಡಿದೆ.

ಮನ್ ಕಿ ಬಾತ್ ಅನ್ನು ಕೇಳಲು ಜನರು ಇಂಟರ್‌ನೆಟ್ ಅನ್ನು ನೆಚ್ಚಿನ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ,  ಶೇ 12 ಜನರು ರೇಡಿಯೋ, ಶೇ 15 ಜನರು ದೂರದರ್ಶನ ಮತ್ತು ಶೇ 37ರಷ್ಟು ಜನರು ಮನ್ ಕಿ ಬಾತ್ ಕೇಳಲು ಇಂಟರ್‌ನೆಟ್ ಆಧಾರಿತ ವೇದಿಕೆಗಳನ್ನು ಬಳಸುತ್ತಾರ’ ಎಂಬ ಆಸಕ್ತಿಕರ ವಿಷಯವೂ ಸಮೀಕ್ಷೆಯಿಂದ ತಿಳಿದುಬಂದಿದೆ.

ಐಐಎಂಸಿ ಮಹಾನಿರ್ದೇಶಕ ಸಂಜಯ್ ದ್ವಿವೇದಿ ಮಾತನಾಡಿ, ‘ದೇಶದಾದ್ಯಂತ 116 ಸುದ್ದಿಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಹಾಗೂ ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಒಟ್ಟು 890 ವ್ಯಕ್ತಿಗಳು ಅಧ್ಯಯನದಲ್ಲಿ ಭಾಗವಹಿಸಿದ್ದಾರೆ’ ಎಂದು ಹೇಳಿದ್ದಾರೆ. 

‘ಮನ್ ಕಿ ಬಾತ್’ ಕಾರ್ಯಕ್ರಮದ ಕೇಳುಗರಲ್ಲಿ ಶೇ 40ರಷ್ಟು ಜನರು ಶಿಕ್ಷಣ ಹಾಗೂ ಶೇ 26ರಷ್ಟು ಜನರು ‘ತಳಮಟ್ಟದ ನವೋದ್ಯಮಿಗಳ ಕುರಿತು ಮಾಹಿತಿ’ ಅತ್ಯಂತ ಪ್ರಭಾವ ಬೀರಿದ ವಿಷಯಗಳು ಎಂದು ಹೇಳಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ. 

‘ಐಐಎಂಸಿಯು ನಡೆಸಿರುವ ಸರ್ವೇಯಲ್ಲಿ ಭಾಗವಹಿಸಿದ ಮಾಧ್ಯಮದ ಶೇ 76ರಷ್ಟು ಜನರು ಈ ರೇಡಿಯೊ ಕಾರ್ಯಕ್ರಮವು ದೇಶದ ಜನರಿಗೆ ‘ನೈಜ ಭಾರತ’ವನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ನಂಬಿದ್ದಾರೆ. ದೇಶದ ಕುರಿತು ಪ್ರಧಾನಿ ಅವರಿಗಿರುವ ದೃಷ್ಟಿ ಹಾಗೂ ಜ್ಞಾನವು ಈ ಕಾರ್ಯಕ್ರಮವನ್ನು ಆಲಿಸಲು ಪ್ರೇರಣೆ ನೀಡುತ್ತದೆ ಎಂದೂ ಅವರು ತಿಳಿಸಿದ್ದಾರೆ’ ಎಂದು ಸಂಜಯ್ ದ್ವಿವೇದಿ ಹೇಳಿದ್ದಾರೆ. 

ಗಂಡು ಮಗುವಿಗೆ ಜನ್ಮ ನೀಡಿದ ‘ಮನ್ ಕಿ ಬಾತ್’ ಅತಿಥಿ

ನವದೆಹಲಿ: ‘ಮನ್ ಕಿ ಬಾತ್‌’ 100ನೇ ಸಂಚಿಕೆಯಲ್ಲಿ ಪಾಲ್ಗೊಂಡಿದ್ದ ಆಹ್ವಾನಿತ ವಿಶೇಷ ಅತಿಥಿ ಉತ್ತರಪ್ರದೇಶದ ಸ್ವಸಹಾಯ ಗುಂಪಿನ ಸದಸ್ಯೆ ಪೂನಂ ದೇವಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಮೋದಿ ಅವರು ತಮ್ಮ ಈ ಹಿಂದಿನ ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ ಲಖಿಂಪುರಖೇರಿ ಸಮೀಪದ ಸ್ವಸಹಾಯ ಗುಂಪಿನ ಸದಸ್ಯೆ ಪೂನಂ ದೇವಿ ಅವರ ಸಾಧನೆಯ ಕುರಿತು ಉಲ್ಲೇಖಿಸಿದ್ದರು.  ‘ಮನ್ ಕಿ ಬಾತ್‌’ನ ಇದುವರೆಗಿನ ಸಂಚಿಕೆಗಳಲ್ಲಿ ಪ್ರಧಾನಿ ಮೋದಿ ಅವರು ಉಲ್ಲೇಖಿಸಿದ ವಿಶೇಷ ವ್ಯಕ್ತಿಗಳನ್ನು ಇಲ್ಲಿನ ವಿಜ್ಞಾನ ಭವನದಲ್ಲಿ ಒಟ್ಟುಗೂಡಿಸಿ ಬುಧವಾರ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲೇ ಪೂನಂ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ರಾಮ ಮನೋಹರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಲಖಿಂಪುರ ಖೇರಿಯಲ್ಲಿರುವ ಸ್ವಸಹಾಯ ಗುಂಪು ಬಾಳೆಯ ಕಾಂಡದ ನಾರಿನಿಂದ ಕೈಚೀಲಗಳು ಚಾಪೆಗಳು ಮತ್ತು ಇತರ ವಸ್ತುಗಳನ್ನು ಉತ್ಪಾದಿಸುತ್ತದೆ. ಇದು ಹಳ್ಳಿಯ ಮಹಿಳೆಯರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುತ್ತದೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ.

‘ಮನ್ ಕಿ ಬಾತ್’ಗೆ ಇಂದು 100ರ ಸಂಭ್ರಮ

ನವದೆಹಲಿ: ಪ್ರಧಾನಿ ಅವರ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ಗೆ ಇಂದು (ಏ.30) 100ರ ಸಂಭ್ರಮ.  2014ರ ಅ. 3ರಂದು ಮೊದಲ ಸಂಚಿಕೆ ಪ್ರಸಾರವಾಗಿತ್ತು. ಇದುವರೆಗೆ 99 ಸಂಚಿಕೆಗಳನ್ನು ಪೂರೈಸಿರುವ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎರಡು ತಿಂಗಳು ಮಾತ್ರ ನಿಲ್ಲಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT