ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ 8 ಸದಸ್ಯರು ಇಂದು ಪೊಲೀಸರ ಮುಂದೆ ಶರಣಾಗಿದ್ದಾರೆ.

ಮಹಾರಾಷ್ಟ್ರ ಹಾಗೂ ಛತ್ತೀಸ್ಗಢ ಮೂಲದ ಸಿಪಿಐ(ಎಂ)ನ ಒಬ್ಬ ವಿಭಾಗೀಯ ಸಮಿತಿ ಸದಸ್ಯ(ಡಿವಿಸಿಎಂ), ಇಬ್ಬರು ಪ್ರದೇಶ ಸಮಿತಿ ಸದಸ್ಯರು (ಎಸಿಎಂ) ಸೇರಿದಂತೆ ಒಟ್ಟು 8 ಮಾವೋವಾದಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಬರೀಶ್.ಪಿ. ಅವರ ಮುಂದೆ ಶರಣಾಗಿದ್ದಾರೆ.

ಈ ವರ್ಷದಲ್ಲಿ ಒಟ್ಟು 355 ನಕ್ಸಲರು ತೆಲಂಗಾಣ ಪೊಲೀಸರ ಬಳಿ ಶರಣಾಗಿದ್ದಾರೆ. ಇದರಲ್ಲಿ 68 ಜನರು ಮುಲುಗು ಪೊಲೀಸರ ಮುಂದೆ ಶರಣಾಗಿದ್ದಾರೆ.

ತೆಲಂಗಾಣ - ಛತ್ತೀಸ್ಗಢದ ಗಡಿ ಪ್ರದೇಶದಲ್ಲಿ ನಿಷೇಧಿತ ಸಿಪಿಐ(ಮಾವೋವಾದ) ಸದಸ್ಯರ ಚಲನವಲನ ಕಂಡುಬಂದಿದ್ದು, ಗಡಿ ಭಾಗದ ಜನರಿಗೆ ನಕ್ಸಲರೊಂದಿಗೆ ಸಹಕರಿಸದಂತೆ ಮತ್ತು ಅವರ ಚಲನವಲನ ಕಂಡುಬಂದರೆ ಆ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು ಎಂದು ಪೊಲೀಸ್ ಇಲಾಖೆಯು ಮನವಿ ಮಾಡಿದೆ.

ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲು ಹಾಗೂ ಅವರನ್ನು ಆಯುಧಗಳ ಸಮೇತ ಶರಣಾಗತಿಯಾಗುವಂತೆ ಮಾಡಲು ತೆಲಂಗಾಣ ಸರ್ಕಾರವು ಹಲವು ಯೋಜನೆಗಳನ್ನು ಕೂಡ ಜಾರಿಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.