ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರು ವ್ಯಕ್ತಿ ನಾಪತ್ತೆ

Published 19 ಏಪ್ರಿಲ್ 2024, 12:26 IST
Last Updated 19 ಏಪ್ರಿಲ್ 2024, 12:26 IST
ಅಕ್ಷರ ಗಾತ್ರ

ಪಣಜಿ: ದೂಧ್‌ಸಾಗರ್ ಜಲಪಾತ ನೋಡಲು ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ 62 ವರ್ಷದ ವ್ಯಕ್ತಿಯು ಕಾಣೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಅಬ್ದುಲ್‌ ರಫೀಕ್ ಹಾಗೂ ಅವರ ಪತ್ನಿ ಜೀಪ್‌ ಒಂದನ್ನು ಬಾಡಿಗೆಗೆ ಪಡೆದು, ದಕ್ಷಿಣ ಗೋವಾದಲ್ಲಿ ಇರುವ ಜಲಪಾತ ನೋಡಲು ಹೋಗಿದ್ದರು. ಗುರುವಾರ ಮಧ್ಯಾಹ್ನದಿಂದ ಅಬ್ದುಲ್ ರಫೀಕ್ ಕಾಣೆಯಾಗಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. 

ಜೀಪ್‌ನಲ್ಲಿ ಪ್ರವಾಸ ಮಾಡಿದ ಸಹಪ್ರಯಾಣಿಕರು ಹಾಗೂ ಪೊಲೀಸರು ಹುಡುಕಾಟ ನಡೆಸಿದರೂ ಅಬ್ದುಲ್ ಪತ್ತೆಯಾಗಿಲ್ಲ. ವರ್ಕಾದ ಹೋಟೆಲ್‌ ಒಂದರಲ್ಲಿ ಅವರು ಹಾಗೂ ಅವರ ಪತ್ನಿ ಉಳಿದುಕೊಂಡಿದ್ದರು. ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ ಎಂದೂ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT