ನವದೆಹಲಿ: ನೋಂದಾಯಿತ ಮಾನ್ಯತೆ ಪಡೆಯದ 476 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ ಮಾಹಿತಿ ನೀಡಿದೆ. ಈ ಪಕ್ಷಗಳು ಕಳೆದ ಆರು ವರ್ಷಗಳಲ್ಲಿ ಒಂದೂ ಚುನಾವಣೆಯಲ್ಲಿ ಭಾಗವಹಿಸಿಲ್ಲ ಹಾಗೂ ಮಾನದಂಡಗಳನ್ನು ಪಾಲಿಸಿಲ್ಲ ಎಂದು ಅದು ಹೇಳಿದೆ.

ಕಾನೂನು ಮತ್ತು ಸಂಬಂಧಿತ ನಿಯಮಗಳನ್ನು ಪಾಲಿಸದ ಕಾರಣಕ್ಕೆ, ಕರ್ನಾಟಕದ 12 ಪಕ್ಷಗಳು ಸೇರಿದಂತೆ 334 ಪಕ್ಷಗಳನ್ನು ಮೊದಲ ಹಂತದಲ್ಲಿ ಆಯೋಗವು ಪಟ್ಟಿಯಿಂದ ಕೈಬಿಟ್ಟಿತ್ತು.

ಎರಡನೇ ಹಂತದಲ್ಲಿ, ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 476 ಪಕ್ಷಗಳನ್ನು ಗುರುತಿಸಲಾಗಿದೆ. ಅನಗತ್ಯವಾಗಿ ಯಾವುದೇ ಪಕ್ಷವನ್ನು ಪಟ್ಟಿಯಿಂದ ಕೈಬಿಡದಂತೆ ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲು ನಿರ್ದೇಶಿಸಲಾಗಿದೆ. ಅಲ್ಲದೇ ಮುಖ್ಯ ಚುನಾವಣಾಧಿಕಾರಿಗಳೊಂದಿಗಿನ ವಿಚಾರಣೆ ಮೂಲಕ ಪಕ್ಷಗಳಿಗೆ ಅವಕಾಶವನ್ನೂ ನೀಡಲಾಗುವುದು ಎಂದು ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 121, ನಂತರ ಕ್ರಮವಾಗಿ ಮಹಾರಾಷ್ಟ್ರದಲ್ಲಿ 44, ತಮಿಳುನಾಡಿನಲ್ಲಿ 42 ಹಾಗೂ ದೆಹಲಿಯಲ್ಲಿ 41 ಪಕ್ಷಗಳನ್ನು ತೆಗೆದು ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.