ನವದೆಹಲಿ: ಉಪರಾಷ್ಟ್ರಪತಿ ಆಯ್ಕೆಗೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.

ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನೂತನ ಅಭ್ಯರ್ಥಿ ಆಯ್ಕೆಗೆ ಸಕಲ ಸಿದ್ಧತೆ ನಡೆಸಿರುವ ಆಯೋಗ, ಗುರುವಾರವಷ್ಟೇ ಮತ ಮೌಲ್ಯಗಳ ಪಟ್ಟಿ (ಮತದಾರರ ಪಟ್ಟಿ) ಅಂತಿಮಗೊಳಿಸಿತ್ತು.

ಧನಕರ್ ಅವರು ಜುಲೈ 21ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಅಧಿಕಾರಾವಧಿ ಇನ್ನೂ ಎರಡು ವರ್ಷವಿತ್ತು.

ಅಧಿಸೂಚನೆ ಪ್ರಕಟ: ಆಗಸ್ಟ್ 7

ನಾಮಪತ್ರ ಸಲ್ಲಿಕೆ ಕೊನೇ ದಿನ: ಆಗಸ್ಟ್ 21

ನಾಮಪತ್ರ ಪರಿಶೀಲನೆ: ಆಗಸ್ಟ್ 22

ನಾಮಪತ್ರ ಹಿಂಪಡೆಯಲು ಕೊನೇ ದಿನ: ಆಗಸ್ಟ್ 25

ಮತದಾನ ದಿನಾಂಕ: ಸೆಪ್ಟೆಂಬರ್ 9 (ಸಮಯ: ಬೆಳಿಗ್ಗೆ 10 – ಸಂಜೆ 5)

ಮತ ಎಣಿಕೆ: ಸೆಪ್ಟೆಂಬರ್ 9

.ಸಂಪಾದಕೀಯ | ಧನಕರ್ ದಿಢೀರ್ ರಾಜೀನಾಮೆ: ಪ್ರಶ್ನೆಗಳು ಹಲವು, ಕಾರಣ ನಿಗೂಢ.ರಾಜೀನಾಮೆ ಘೋಷಣೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದ ಧನಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.