ತಮಿಳುನಾಡು: ಸತ್ಯಮಂಗಲ ಹುಲಿ ಸಂರಕ್ಷಿತಾರಣ್ಯದ ಬಳಿ ಕಾಡಾನೆ ದಾಳಿಯಿಂದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
2 ಎಕರೆ ಜಾಗದಲ್ಲಿ ಬೆಳೆದಿದ್ದ ಬೆಳೆ ಕಾಯಲು ಮಾದೇಶ್ (19) ಮತ್ತು ಸಿಬು(16) ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಮಲಗಿದ್ದರು. ಬೆಳಗ್ಗಿನ ಜಾವ 3ರ ಹೊತ್ತಿಗೆ ಆನೆ ಜಮೀನಿಗೆ ಬಂದು ಬೆಳೆಗಳನ್ನು ತಿಂದಿದ್ದು, ಗುಡಿಸಿಲಿನ ಮೇಲೆಯೂ ದಾಳಿ ಮಾಡಿದೆ. ಆ ವೇಳೆ ಅಲ್ಲಿದ್ದ ಇಬ್ಬರು ಯುವಕರೂ ಗಾಯಗೊಂಡಿದ್ದಾರೆ.
ತಕ್ಷಣ ಯುವಕರು ಸುತ್ತಮುತ್ತಲಿನ ಹಳ್ಳಿಯ ಜನರನ್ನು ಕೂಗಿ ಕರೆದು ಆನೆಯನ್ನು ಕಾಡಿಗೆ ಓಡಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಯುವಕರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಕರ್ನಾಟಕದ ಚಾಮರಾಜನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.