ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಅವರ ಭೇಟಿಗೆ ಭಾರತ ಕಾಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಮ್ಯಾನುವಲ್ ಮ್ಯಾಕ್ರನ್ ಅವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಈ ವೇಳೆ ಮುಂಬೈ ಹಾಗೂ ನವದೆಹಲಿಗೆ ಭೇಟಿ ನೀಡಲಿದ್ದಾರೆ.

‘ನಾನು ಭಾರತಕ್ಕೆ ಪ್ರಯಾಣ ಮಾಡುತ್ತಿದ್ದೇನೆ. ಈ ಮೂರು ದಿನಗಳ ಭೇಟಿಯು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ನೆರವಾಗಲಿದೆ ಎಂದು ಭಾವಿಸಿದ್ದೇನೆ. ನಾವು ಜತೆಯಲ್ಲೇ ಸಾಗೋಣ’ ಎಂದು ಇಮ್ಯಾನುವಲ್ ಮ್ಯಾಕ್ರನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.

ಅದಕ್ಕೆ ಕಾಮೆಂಟ್ ಮಾಡಿರುವ ಮೋದಿ ‘ಭಾರತಕ್ಕೆ ಸ್ವಾಗತ. ನಾವು ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಈ ಮೂಲಕ ಜಾಗತಿಕ ಬೆಳವಣಿಗೆಗೆ ನೆರವಾಗೋಣ. ಸ್ನೇಹಿತರೇ, ಮುಂಬೈ ಹಾಗೂ ದೆಹಲಿಯಲ್ಲಿ ನಾನು ನಿಮ್ಮನ್ನು ಭೇಟಿಯಾಗಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಫ್ರಾನ್ಸ್ ಉದ್ಯಮಿಗಳು, ಆರ್ಥಿಕ ತಜ್ಞರು, ಕೈಗಾರಿಕೋದ್ಯಮಿಗಳು, ಸಾಂಸ್ಕೃತಿಕ ನಾಯಕರೊಂದಿಗೆ ಇಮ್ಯಾನುವಲ್ ಮ್ಯಾಕ್ರನ್ ಅವರು ಫೆ.17 ರಿಂದ 19ರವರೆಗೆ ಭಾರತ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಭಾರತ ಆತಿಥ್ಯದಲ್ಲಿ ನಡೆಯುವ ಎ.ಐ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದು ಭಾರತಕ್ಕೆ ಮ್ಯಾಕ್ರನ್ ಅವರ ನಾಲ್ಕನೇ ಭೇಟಿಯಾಗಿದ್ದು, ಮಂಗಳವಾರ ಮುಂಜಾನೆ ಮುಂಬೈಗೆ ಬಂದಿಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.