ತಿರುವನಂತಪುರ: ಆರ್ಎಸ್ಎಸ್ ಶಾಖೆಗಳಲ್ಲಿ ಬಳಸಲಾಗುವ ಭಾರತ ಮಾತೆಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಕಾರ್ಯಕ್ರಮವನ್ನು ಕಾರ್ಯಕ್ರಮಗಳ ಪಟ್ಟಿಗೆ ಸೇರಿಸಲು ರಾಜಭವನದ ಅಧಿಕಾರಿಗಳು ಒತ್ತಾಯಿಸಿದ್ದರಿಂದ ಅಲ್ಲಿ ನಡೆಯಬೇಕಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯ ಕೃಷಿ ಇಲಾಖೆಯು ಬೇರೆಡೆಗೆ ಸ್ಥಳಾಂತರಿಸಿತು.

ಬಳಿಕ ಸಚಿವಾಲಯಗಳ ಕಟ್ಟಡದ ‘ದರ್ಬಾರ್’ ಸಭಾಂಗಣದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ‘ರಾಜ್ಯ ಸರ್ಕಾರವು ಭಾರತ ಮಾತೆಯನ್ನು ಗೌರವಿಸುತ್ತದೆ. ಆದರೆ, ಆರ್ಎಸ್ಎಸ್ ಶಾಖೆಗಳಲ್ಲಿ ಬಳಸಲಾಗುವ ಭಾವಚಿತ್ರವನ್ನು ರಾಜಭವನದಲ್ಲಿ ನಡೆಯುವ ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಬಳಸುವುದು ಅಸಾಂವಿಧಾನಿಕ’ ಎಂದು ಕೃಷಿ ಸಚಿವ ಪಿ. ಪ್ರಸಾದ್ ಪ್ರತಿಕ್ರಿಯಿಸಿದರು.

ಭಾರತ ಮಾತೆಯ ಭಾವಚಿತ್ರವನ್ನು ಬಳಸಬೇಕು ಎಂದು ಕೊನೇ ಕ್ಷಣದಲ್ಲಿ ರಾಜಭವನದ ಅಧಿಕಾರಿಗಳು ಒತ್ತಾಯಿಸಿದರು. ಘಟನೆ ಬಗ್ಗೆ ರಾಜಭವನವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.