ಹೆಚ್ಚುವಟಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸಿಬಿಐ ಹಾಗೂ ಇ.ಡಿ. ಪರವಾಗಿ ಹಾಜರಾಗಿ, ಸಿಸೋಡಿಯಾ ಸಲ್ಲಿಸಿರುವ ಅರ್ಜಿಗಳಿಗೆ ಆಕ್ಷೇಪ ದಾಖಲಿಸಿದ್ದರು. ದೆಹಲಿ ಹೈಕೋರ್ಟ್ ಆದೇಶವನ್ನು ಸಿಸೋಡಿಯಾ ಅವರು ಎರಡನೆಯ ಬಾರಿ ಪ್ರಶ್ನಿಸುತ್ತಿದ್ದಾರೆ, ಒಂದೇ ಆದೇಶವನ್ನು ಎರಡು ಬಾರಿ ಪ್ರಶ್ನಿಸಲು ಅವಕಾಶ ಇಲ್ಲ ಎಂದು ರಾಜು ಅವರು ವಿಭಾಗೀಯ ಪೀಠಕ್ಕೆ ವಿವರಿಸಿದ್ದರು.