ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಜ್‌ಭೂಷಣ್ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಪ್ರಕರಣ: ಬಾಲಕಿಯ ತಂದೆ ಹೇಳಿಕೆ

Published 9 ಜೂನ್ 2023, 4:50 IST
Last Updated 9 ಜೂನ್ 2023, 4:50 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಮಗಳಿಗಾದ ಅನ್ಯಾಯಕ್ಕೆ ಪ್ರತಿಯಾಗಿ ಭಾರತೀಯ ಕುಸ್ತಿ ಫೆಡರೇಶನ್ ಅಧ್ಕ್ಷಕ್ಷ ಬ್ರಿಜ್‌ಭೂಷಣ್ ವಿರುದ್ಧ ಉದ್ದೇಶಪೂರ್ವಕವಾಗಿ ಲೈಂಗಿಕ ಕಿರುಕುಳದ ಸುಳ್ಳು ಪೊಲೀಸ್ ದೂರು ದಾಖಲಿಸಿದ್ದಾಗಿ 18 ವರ್ಷದೊಳಗಿನ ಕುಸ್ತಿಪಟುವಿನ ತಂದೆ ಗುರುವಾರ ಪಿಟಿಐಗೆ ತಿಳಿಸಿದ್ದಾರೆ.

ಬ್ರಿಜ್‌ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಕುಸ್ತಿಪಟುಗಳು ಆರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಪ್ರಾಪ್ತ ಕುಸ್ತಿಪಟು ನೀಡಿದ ದೂರಿನ ಆಧಾರದ ಮೇರೆಗೆ ಪೋಕ್ಸೊ ಕಾಯ್ದೆಯಡಿಯೂ ತನಿಖೆ ನಡೆಸಲಾಗುತ್ತಿದೆ.

ನೀವೇಕೆ ಈಗ ಉಲ್ಟಾ ಹೊಡೆಯುತ್ತಿದ್ದೀರಿ ಎಂದು ಕೇಳಿದಾಗ, ‘ನ್ಯಾಯಾಲಯದ ಬದಲು ಈಗಲೇ ಸತ್ಯವು ಹೊರಬರುವುದು ಉತ್ತಮ’ ಎಂದು 18 ವರ್ಷದೊಳಗಿನ ಕುಸ್ತಿಪಟುವಿನ ತಂದೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

‘ಈಗ ಎಲ್ಲದರ ವಿಚಾರಣೆ ಆರಂಭವಾಗಿದೆ. ಕಳೆದ ವರ್ಷ ನನ್ನ ಮಗಳ ಸೋಲಿನ (ಏಷ್ಯನ್ ಅಂಡರ್17 ಚಾಂಪಿಯನ್‌ಶಿಪ್ ಟ್ರಯಲ್ಸ್‌) ನ್ಯಾಯಯುತ ತನಿಖೆಗೆ ಸರ್ಕಾರವು ಭರವಸೆ ನೀಡಿದೆ, ಹಾಗಾಗಿ, ನನ್ನ ತಪ್ಪನ್ನು ಸರಿಪಡಿಸುವುದು ನನ್ನ ಕರ್ತವ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

2022ರಲ್ಲಿ ಲಖನೌದಲ್ಲಿ ನಡೆದ 17 ವರ್ಷದೊಳಗಿನ ಏಷ್ಯನ್ ಚಾಂಪಿಯನ್‌ಶಿಪ್ ಟ್ರಯಲ್ಸ್‌ ಹಗೆತನದ ಮೂಲವಾಗಿದೆ. ಅಪ್ರಾಪ್ತ ಕುಸ್ತಿಪಟು ಫೈನಲ್‌ನಲ್ಲಿ ಸೋತು ಭಾರತ ತಂಡಕ್ಕೆ ಆಯ್ಕೆಯಾಗುವುದರಿಂದ ತಪ್ಪಿಸಿಕೊಂಡಿದ್ದರು. ಆಗ ರೆಫರಿ ಕೈಗೊಂಡಿದ್ದ ನಿರ್ಧಾರಕ್ಕೆ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಬಾಲಕಿಯ ತಂದೆ ದೂಷಿಸಿದ್ದಾರೆ.

  • ‘ಫೈನಲ್‌ನಲ್ಲಿ ಆ ತೀರ್ಪುಗಾರರ ತಪ್ಪು ನಿರ್ಧಾರದಿಂದಾಗಿ ನನ್ನ ಮಗುವಿನ ಒಂದು ವರ್ಷದ ಕಠಿಣ ಪರಿಶ್ರಮ ವ್ಯರ್ಥವಾಗಿತ್ತು. ಹಾಗಾಗಿ, ನಾನು ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT