ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದ ಬಳಿಕ ಮೌತ್ ಫ್ರೆಶ್ನರ್ ಬಳಸಿ ಐವರು ಅಸ್ವಸ್ಥ: ರೆಸ್ಟೋರೆಂಟ್‌ ವಿರುದ್ಧ FIR

Published 5 ಮಾರ್ಚ್ 2024, 12:47 IST
Last Updated 5 ಮಾರ್ಚ್ 2024, 12:47 IST
ಅಕ್ಷರ ಗಾತ್ರ

ಗುರುಗ್ರಾಮ: ರೆಸ್ಟೋರೆಂಟ್‌ವೊಂದರಲ್ಲಿ ಊಟದ ನಂತರ ಮೌತ್‌ ಫ್ರೆಶ್ನರ್‌ ಬಳಸಿದ ಐವರು ಅಸ್ವಸ್ಥಗೊಂಡಿರುವ ಘಟನೆ ಹರಿಯಾಣದ ಗುರುಗ್ರಾಮನಲ್ಲಿ ನಡೆದಿದೆ.

ಐವರಲ್ಲಿ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಶನಿವಾರ ರಾತ್ರಿ ಊಟಕ್ಕೆ ಪತ್ನಿ ಹಾಗೂ ನಾಲ್ವರು ಸ್ನೇಹಿತರೊಂದಿಗೆ ಅಂಕಿತ್ (ನೋಯ್ಡಾ ನಿವಾಸಿ) ಗುರುಗ್ರಾಮದ ಸೆಕ್ಟರ್‌90ರ ರೆಸ್ಟೋರೆಂಟ್‌ಗೆ ತೆರಳಿದ್ದರು. ಊಟದ ಬಳಿಕ ರೆಸ್ಟೋರೆಂಟ್‌ನ ಸಿಬ್ಬಂದಿಯೊಬ್ಬರು ಡ್ರೈ ಐಸ್ ಮಿಶ್ರಿತ ಮೌತ್ ಫ್ರೆಶ್ನರ್ ಅನ್ನು ತಂದು ಕೊಟ್ಟಿದ್ದರು. ಅದನ್ನು ಬಳಸಿದ ಬಳಿಕ ನಾಲ್ವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಂಕಿತ್ ಕುಮಾರ್ ಘಟನೆ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೌತ್ ​​ಫ್ರೆಶ್ನರ್ ಬಳಸಿದ ಬಳಿಕ ಐವರೂ ಬಾಯಿಯಲ್ಲಿ ಸುಡುವ ಸಂವೇದನೆಯನ್ನು ಅನುಭವಿಸಿದ್ದರು. ಹಾಗೂ ರಕ್ತ ಸಹಿತ ವಾಂತಿಯಾಗಿತ್ತು ಎಂದು ಕುಮಾರ್ ಹೇಳಿದ್ದಾರೆ.

ಮೌತ್ ಫ್ರೆಶ್ನರ್ ಪ್ಯಾಕೆಟ್ ಅನ್ನು ವೈದ್ಯರಿಗೆ ತೋರಿಸಿದಾಗ ಡ್ರೈ ಐಸ್ ( ಕಾರ್ಬನ್ ಡೈ ಆಕ್ಸೈಡ್) ಎಂದು ಹೇಳಿದರು ಹಾಗೂ ಇದು ಸಾವಿಗೆ ಕಾರಣವಾಗಬಹುದೆಂದೂ ತಿಳಿಸಿದ್ದರು ಎಂದು ಅಂಕಿತ್‌ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT