ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಯ್ಡಾ | ಹಿಂದೋನ್ ನದಿಯಲ್ಲಿ ಪ್ರವಾಹ ಭೀತಿ, 200 ಜನರ ಸ್ಥಳಾಂತರ

Published 23 ಜುಲೈ 2023, 12:59 IST
Last Updated 23 ಜುಲೈ 2023, 12:59 IST
ಅಕ್ಷರ ಗಾತ್ರ

ನೋಯ್ಡಾ: ಹಿಂದೋನ್ ನದಿ ನೀರಿನ ಹೊರಹರಿವು ಹೆಚ್ಚಿದ್ದರಿಂದ, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಗೌತಮ ಬುದ್ಧ ನಗರ ಆಡಳಿತವು ಎಚ್ಚರಿಸಿದೆ.

ಶನಿವಾರ ಪ್ರವಾಹ ಭೀತಿ ಉಂಟಾದ ಬಳಿಕ ಸುಮಾರು 200 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿಂದೋನ್ ನದಿಯ ಅಪಾಯದ ಮಟ್ಟವು 205 ಮೀಟರ್‌ ಆಗಿದೆ. ಸದ್ಯ ನದಿ ನೀರಿನ ಮಟ್ಟ 200 ಮೀಟರ್‌ ತಲುಪಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಐದು ಗ್ರಾಮಗಳಿಂದ ಸ್ಥಳಾಂತರಿಸಲಾಗಿರುವ 200 ಜನರಿಗೆ ವಸತಿ, ಆಹಾರ ಮತ್ತು ಆರೋಗ್ಯ, ರಕ್ಷಣೆಯನ್ನು ಒದಗಿಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅತುಲ್ ಕುಮಾರ್ ತಿಳಿಸಿದರು.

ಗೌತಮ ಬುದ್ಧ ನಗರವು ಹಿಂದೋನ್ ಮತ್ತು ಯಮುನಾ ನದಿಗಳ ನಡುವೆ ಇದ್ದು, ಇತ್ತೀಚೆಗೆ ಯಮುನಾ ನದಿ ಪ್ರವಾಹಕ್ಕೆ ಸಾಕ್ಷಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT