ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರಪ್ರದೇಶ: ಗ್ರಾಮಗಳ ಮೇಲೆ ತೋಳಗಳ ದಾಳಿ ತಪ್ಪಿಸಲು ಆನೆ ಲದ್ದಿ ಬಳಕೆ

Published 26 ಆಗಸ್ಟ್ 2024, 14:33 IST
Last Updated 26 ಆಗಸ್ಟ್ 2024, 14:33 IST
ಅಕ್ಷರ ಗಾತ್ರ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಹಸಿ ತೆಹಸಿಲ್‌ ಗ್ರಾಮದಲ್ಲಿನ ಜನರನ್ನು ತೋಳಗಳ ದಾಳಿಯಿಂದ ಕಾಪಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಲದ್ದಿ ಬಳಸುತ್ತಿದ್ದಾರೆ.

ಗ್ರಾಮಕ್ಕೆ ಪದೇ ಪದೇ ತೋಳಗಳು ನುಗ್ಗಿ ದಾಳಿ ನಡೆಸುತ್ತಿದ್ದು 40 ದಿನಗಳಲ್ಲಿ ಐವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೋಳಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ‘ಡ್ರೋನ್ ಸಹಾಯದಿಂದ ಆರು ತೊಳಗಳನ್ನು ಪತ್ತೆ ಮಾಡಲಾಗಿದ್ದು, ಮೂರು ತೋಳಗಳನ್ನು ಈಗಾಗಲೇ ಸರೆಹಿಡಿಯಲಾಗಿದೆ. ಗ್ರಾಮಸ್ಥರ ರಕ್ಷಣೆ ನಮಗೆ ಮೊದಲ ಆದ್ಯತೆಯಾಗಿದೆ. ಊರಿನತ್ತ ಅವು ಬರದಂತೆ ತಡೆಯಬೇಕಿದೆ’ ಎಂದು ಅರಣ್ಯಾಧಿಕಾರಿ ಅಕ್ಷದೀಪ್‌ ತಿಳಿಸಿದ್ದಾರೆ.

ಆನೆಗಳ ಇರುವಿಕೆಯನ್ನು ಸೃಷ್ಟಿಸಲು ಆನೆ ಲದ್ದಿಗೆ ಬೆಂಕಿ ಹಚ್ಚಲಾಗುತ್ತದೆ. ಇದರಿಂದ ಬರುವ ಪರಿಮಳವು ಆನೆಗಳಿವೆ ಎನ್ನುವಂತೆ ತೋಳಗಳಿಗೆ ಭಾಸವಾಗುತ್ತದೆ. ಯಾವಾಗಲೂ ಆನೆಯಂತಹ ದೊಡ್ಡ ಪ್ರಾಣಿಗಳಿಂದ ತೋಳಗಳು ದೂರವಿರುತ್ತವೆ. ಈ ರೀತಿಯ ಊಹೆಯನ್ನು ಸೃಷ್ಟಿಸುವ ಮೂಲಕ ಅವು ಜನವಸತಿ ಪ್ರದೇಶಗಳತ್ತ ಬರುವುದನ್ನು ತಡೆಯಬಹುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

ಈವರೆಗೆ ತೋಳದ ದಾಳಿಯಿಂದ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸದ್ಯ ಗ್ರಾಮಸ್ಥರನ್ನು ಕಾಪಾಡಲು ಪೊಲೀಸರು. ಸ್ಥಳೀಯ ತಂಡಗಳು ಗಸ್ತು ತಿರುಗುತ್ತಿವೆ. ಉಳಿದ ತೋಳಗಳ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT