ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಸಿಜೆಐ ಲೋಧಾಗೆ ₹ 1 ಲಕ್ಷ ಮೋಸ

Last Updated 3 ಜೂನ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರಿಗೆ ಸಹೋದ್ಯೋಗಿ ಒಬ್ಬರ ಇ– ಮೇಲ್‌ ಅನ್ನು ಹ್ಯಾಕ್‌ ಮಾಡಿ ಒಂದು ಲಕ್ಷ ಮೋಸ ಮಾಡಿದ್ದಾರೆ.

ದೆಹಲಿ ಪೊಲೀಸರು ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಧಾ ಅವರು ಮೋಸ ಹೋಗಿರುವುದು ಮೇ 30 ರಂದು ಬೆಳಕಿಗೆ ಬಂದಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಪಿ.ಸಿಂಗ್ ಅವರು ಲೋಧಾ ಅವರಿಗೆ ಇ– ಮೇಲ್‌ ಅನ್ನು ಕಳುಹಿಸಿದ್ದರು.ಮೇ 30 ರಂದು ಸಿಂಗ್‌ ಅವರ ಈ ಮೇಲ್‌ ಖಾತೆ ಹ್ಯಾಕ್‌ ಆಗಿರುವುದು ತಿಳಿದಾಗಲೇ ಲೋಧಾ ಅವರು ಮೋಸ ಹೋಗಿರುವುದು ಗೊತ್ತಾಗಿದೆ. ಹ್ಯಾಕರ್ ಒಬ್ಬ ಲೋಧಾ ಅವರಿಗೆ ಸಿಂಗ್ ಅವರ ಈ ಮೇಲ್‌ ಮೂಲಕ ಮೋಸಗೊಳಿಸಿರುವುದು ಗಮನಕ್ಕೆ ಬಂದಿದೆ. ಕೂಡಲೇ ಲೋಧಾ ಅವರು ಮಾಲವೀಯ ನಗರ್‌ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ್ದರು.

‘ಏಪ್ರಿಲ್‌ 19ರ ರಾತ್ರಿ 1.40ರ ಸುಮಾರಿಗೆ ನನ್ನ ಸಹೋದ್ಯೋಗಿ ಸಿಂಗ್ ಅವರಿಂದ ಈ ಮೇಲ್‌ ಬಂದಿತ್ತು. ಸಿಂಗ್ ಅವರ ಸಂಬಂಧಿಯೊಬ್ಬರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅದಕ್ಕೆ ₹ 1ಲಕ್ಷ ಹಣದ ಕೊರತೆ ಇದೆ ಎಂದು ಹೇಳಲಾಗಿತ್ತು. ರಾತ್ರಿ 4.10ಕ್ಕೆ ಬ್ಯಾಂಕ್‌ ಖಾತೆ ವಿವರ ಪಡೆದು ಎರಡು ಬಾರಿ ತಲಾ ₹50 ಸಾವಿರದಂತೆ ಹಣ ಹಾಕಿದ್ದೆ’ ಎಂದು ಲೋಧಾ ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT