ಹೈದರಾಬಾದ್: ಫಾರ್ಮುಲಾ ಇ ರೇಸ್ನಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪದಡಿ ತೆಲಂಗಾಣ ಶಾಸಕ, ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಜಿಷ್ಣು ದೇವ್ ಶರ್ಮ ಅನುಮತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಟಿ.ರಾಮರಾವ್, 'ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದಕ್ಕೆ ಕಾನೂನು ಬದ್ಧವಾಗಿಯೇ ಉತ್ತರಿಸುತ್ತೇನೆ' ಎಂದು ಹೇಳಿದ್ದಾರೆ.
.Fact check: ಭಾರತ 'ಭಯೋತ್ಪಾದನೆಗೆ ಪ್ರೋತ್ಸಾಹಿಸುವ ದೇಶ' ಎಂದು ಕೆನಡಾ ಘೋಷಿಸಿಲ್ಲ.Oscars 2025: ಆಸ್ಕರ್ ಪ್ರಶಸ್ತಿ ರೇಸ್ನಿಂದ ಭಾರತದ 'ಲಾಪತಾ ಲೇಡೀಸ್' ಹೊರಕ್ಕೆ.
ನೀವು (ರೇವಂತ್ ರೆಡ್ಡಿ) ಹಗರಣಗಳ ಬಗ್ಗೆ ಮಾತನಾಡುತ್ತಿದ್ದೀರಿ, ವಿಧಾನಸಭೆ ಅಧಿವೇಶನದಲ್ಲಿಯೇ ನಾನು ಉತ್ತರಿಸುವೆ. ನಿಮ್ಮ ಪ್ರಶ್ನೆಗಳಿಗೆ ಅಲ್ಲಿಯೇ ತಕ್ಕ ಉತ್ತರ ನೀಡುವೆ ಎಂದೂ ಸವಾಲು ಹಾಕಿದ್ದಾರೆ.

‘ಕೇಂದ್ರದಿಂದ ಅನುದಾನ ಪಡೆಯಲು ಆಗದ ಕಾಂಗ್ರೆಸ್ ಸರ್ಕಾರ, ಕೇವಲ ಪ್ರಕರಣಗಳನ್ನು ದಾಖಲಿಸುವತ್ತ ಉತ್ಸುಕತೆ ತೋರಿದೆ‘ ಎಂದೂ ಕಿಡಿಕಾರಿದ್ದಾರೆ.
.ರೇಣುಕಸ್ವಾಮಿ ಕೊಲೆ ಪ್ರಕರಣ: ಜಾಮೀನು ಸಿಕ್ಕರೂ 6ನೇ ಆರೋಪಿ ಬಿಡುಗಡೆ ಇಲ್ಲ.ಜಾತಿ ಸಿಂಧುತ್ವ: ಹೈಕೋರ್ಟ್ ಅಧಿಕಾರ ಅಬಾಧಿತ.
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರಿಂದ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಕೆ.ಟಿ ರಾಮರಾವ್ ಅವರು ಪೌರಾಡಳಿತ ಸಚಿವರಾಗಿದ್ದಾಗ, ಸೂಕ್ತ ನಿಯಮಗಳನ್ನು ಪಾಲಿಸದೇ ರೇಸ್ ಆಯೋಜಕರಿಗೆ ₹55 ಕೋಟಿ ವರ್ಗಾಯಿಸಲು ಅನುಮತಿ ನೀಡಿದ್ದಾರೆ ಎಂದು ಎಸಿಬಿ ಆರೋಪಿಸಿದೆ.
.ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳು ಬೆಂಗಳೂರಲ್ಲೇ ಹೆಚ್ಚು; ಮೈಸೂರಿಗೆ 2ನೇ ಸ್ಥಾನ.ತೆಲಂಗಾಣ | KT ರಾಮರಾವ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಕೋರ್ಟ್ ನಿರ್ದೇಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.