ನವದೆಹಲಿ: ಬಹುನಿರೀಕ್ಷಿತ ಆಸ್ಕರ್ 2025 ಪ್ರಶಸ್ತಿ ರೇಸ್ನಿಂದ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ 'ಲಾಪತಾ ಲೇಡೀಸ್' ಹೊರಬಿದ್ದಿದೆ.

97ನೇ ಅಕಾಡೆಮಿ ಅವಾರ್ಡ್ಸ್ನಲ್ಲಿ 'ಬೆಸ್ಟ್ ಇಂಟರ್ನ್ಯಾಷನಲ್ ಫೀಚರ್' ವಿಭಾಗದಲ್ಲಿ ಲಾಪತಾ ಲೇಡೀಸ್ ಸ್ಪರ್ಧಿಸಿತ್ತು.

ಕಿರಣ್ ರಾವ್ ನಿರ್ದೇಶನದ ಈ ಹಿಂದಿ ಚಿತ್ರ ಅಂತಿಮ 15ರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್ (ಎಎಂಪಿಎಎಸ್) ತಿಳಿಸಿದೆ.

ಹಾಗಿದ್ದರೂ ಬ್ರಿಟನ್-ಭಾರತ ಮೂಲದ ನಿರ್ಮಾಪಕಿ ಸಂಧ್ಯಾ ಸೂರಿ ಅವರ 'ಸಂತೋಷ್' ಪ್ರಶಸ್ತಿ ರೇಸ್ನಲ್ಲಿ ಕಾಣಿಸಿಕೊಂಡಿದೆ.

ಬ್ರಿಟನ್ ಪ್ರತಿನಿಧಿಸುವ ಈ ಹಿಂದಿ ಚಿತ್ರದಲ್ಲಿ ಭಾರತೀಯರಾದ ಶಹಾನಾ ಗೋಸ್ವಾಮಿ ಮತ್ತು ಸುನೀತಾ ರಾಜ್ವರ್ ನಟಿಸಿದ್ದಾರೆ.

ಆಸ್ಕರ್ ಪ್ರಶಸ್ತಿಗಾಗಿ ಅಂತಿಮ ನಾಮನಿರ್ದೇಶನ ಪಟ್ಟಿಯನ್ನು ಜನವರಿ 17ರಂದು ಪ್ರಕಟಿಸಲಾಗುವುದು. ಆಸ್ಕರ್ ಪ್ರಶಸ್ತಿಗಾಗಿ 85 ದೇಶಗಳಿಂದ ಎಂಟ್ರಿ ಸಲ್ಲಿಸಲಾಗಿತ್ತು ಎಂದು ಅಕಾಡೆಮಿ ತಿಳಿಸಿದೆ.

ಪ್ರಶಸ್ತಿ ರೇಸ್ನಲ್ಲಿರುವ ಚಿತ್ರಗಳು:

ಎಮಿಲಿಯಾ ಪೆರೆಜ್ (ಫ್ರಾನ್ಸ್),

ಐ ಆ್ಯಮ್ ಸ್ಟೀಲ್ ಹಿಯರ್ (ಬ್ರೆಜಿಲ್),

ಯೂನಿವರ್ಸಲ್ ಲಾಂಗ್ವೆಜ್ (ಕೆನಡಾ),

ವೇವ್ಸ್ (ಜೆಕ್ ಗಣರಾಜ್ಯ),

ದಿ ಗರ್ಲ್ ವಿಥ್ ದಿ ನೀಡ್ಲ್ (ಡೆನ್ಮಾರ್ಕ್),

ದಿ ಸೀಡ್ ಆಫ್ ಸೇಕ್ರೆಡ್ ಪಿಗ್ (ಜರ್ಮನಿ),

ಟಚ್ (ಐಸ್ಲ್ಯಾಂಡ್),

ನೀಕ್ಯಾಪ್ (ಐರ್ಲೆಂಡ್),

ವೆರ್ಮಿಲಿಯೊ (ಇಟಲಿ),

ಫ್ಲೋ (ಲಾಟ್ವಿಯಾ),

ಅರ್ಮಂಡ್ (ನಾರ್ವೇ),

ಫ್ರಮ್ ಗ್ರೌಂಡ್ ಝೀರೋ (ಪ್ಯಾಲೆಸ್ಟೀನ್),

ದಹೋಮಿ (ಸೆನೆಗಲ್),

ಹೌ ಟು ಮೇಕ್ ಮಿಲಿಯನ್ಸ್ ಬಿಫಾರ್ ಗ್ರಾಂಡ್ಮ ಡೈಸ್ (ಥಾಯ್ಲೆಂಡ್)

ಸಂತೋಷ್ (ಬ್ರಿಟನ್)
.ಮೊದಲ ದಿನವೇ ಜಾಗತಿಕವಾಗಿ ₹1.70 ಕೋಟಿ ಗಳಿಸಿದ 'ಲಾಪತಾ ಲೇಡೀಸ್' ಚಿತ್ರ.'ಲಾಪತಾ ಲೆಡೀಸ್' ಪ್ರದರ್ಶನಕ್ಕೆ ಸುಪ್ರೀಂಕೋರ್ಟ್ಗೆ ಬಂದ ಅಮೀರ್ ಖಾನ್,ಕಿರಣ್ ರಾವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.