ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ಜಾಗತಿಕವಾಗಿ ₹1.70 ಕೋಟಿ ಗಳಿಸಿದ 'ಲಾಪತಾ ಲೇಡೀಸ್' ಚಿತ್ರ

Published 2 ಮಾರ್ಚ್ 2024, 12:35 IST
Last Updated 2 ಮಾರ್ಚ್ 2024, 12:35 IST
ಅಕ್ಷರ ಗಾತ್ರ

ಮುಂಬೈ: ಕಿರಣ್ ರಾವ್ ನಿರ್ದೇಶನದ 'ಲಾಪತಾ ಲೇಡೀಸ್' ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಜಾಗತಿಕವಾಗಿ ₹1.70 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಶನಿವಾರ ತಿಳಿಸಿದ್ದಾರೆ.

ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಇದನ್ನು ಚಿತ್ರೀಕರಿಸಲಾಗಿದ್ದು, ರೈಲು ಪ್ರಯಾಣದ ವೇಳೆ ಅದಲುಬದಲಾದ ಇಬ್ಬರು ವಧುಗಳ ಕಥಾವಸ್ತು ಹೊಂದಿದೆ.

ಮಾರ್ಚ್‌ 1ರಂದು ಬಿಡುಗಡೆಯಾದ ಈ ಚಿತ್ರ ವಿಮರ್ಶಕರಿಂದ ಉತ್ತಮ ಮೆಚ್ಚುಗೆ ಪಡೆದಿದೆ. ಚಿತ್ರದಲ್ಲಿ ರವಿ ಕಿಶನ್, ಪ್ರತಿಭಾ ರತ್ನ, ನಿತಾಂಶಿ ಗೋಯೆಲ್ ಮತ್ತು ಸ್ಪರ್ಶ್ ಶ್ರೀವಾಸ್ತವ್ ಮುಖ್ಯಪಾತ್ರದಲ್ಲಿದ್ದಾರೆ.

ಅಮೀರ್ ಖಾನ್ ಪ್ರೊಡಕ್ಷನ್ಸ್ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಚಿತ್ರದ ಮೊದಲ ದಿನದ ಗಳಿಕೆಯ ಅಂಕಿಅಂಶಗಳನ್ನು ಹಂಚಿಕೊಂಡಿದೆ. ಚಿತ್ರವು ಪ್ರಪಂಚದಾದ್ಯಂತ ಒಟ್ಟು ₹1.70 ಕೋಟಿ ಮತ್ತು ಭಾರತದಲ್ಲಿ ₹1 .02 ಕೋಟಿ ಸಂಗ್ರಹಿಸಿದೆ ಎಂದು ಹೇಳಿದೆ.

ಲಾಪತಾ ಲೇಡೀಸ್ ಚಿತ್ರವು ಬಿಪ್ಲಬ್ ಗೋಸ್ವಾಮಿಯವರು ಬರೆದಿರುವ ಕಥೆಯನ್ನು ಆಧರಿಸಿದೆ. ಸ್ನೇಹಾ ದೇಸಾಯಿ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ರಾವ್ ಕಿಂಡ್ಲಿಂಗ್ ಪ್ರೊಡಕ್ಷನ್ಸ್ ನಿರ್ಮಿಸಿದೆ.

ಬಹಳ ವರ್ಷಗಳ ಬಳಿಕ ಕಿರಣ್ ರಾವ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. 2011ರಲ್ಲಿ ಅವರು ‘ಧೋಬಿ ಘಾಟ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. 13 ವರ್ಷಗಳ ಬಳಿಕ ಅವರ ನಿರ್ದೇಶನದಲ್ಲಿ ಲಾಪತಾ ಲೇಡೀಸ್ ಚಿತ್ರ ಮೂಡಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT