ಅಹಮದಾಬಾದ್: ದರ್ಗಾದ ಬಳಿ ಸಿಗರೇಟು ಸೇದುತ್ತಿದ್ದ, ಚಪ್ಪಲಿಯಲ್ಲಿ ಓಡಾಡುತ್ತಿದ್ದ ನಾಲ್ವರು ವಿದೇಶಿ ವಿದ್ಯಾರ್ಥಿಗಳ ಮೇಲೆ 10 ಮಂದಿಯ ಗುಂಪೊಂದು ಹಲ್ಲೆ ನಡೆಸಿದ್ದು, ಥಾಯ್ಲೆಂಡ್ನ ವಿದ್ಯಾರ್ಥಿಯೊಬ್ಬರಿಗೆ ತಲೆಗೆ ತೀವ್ರ ಪೆಟ್ಟಾಗಿದೆ.

ಥಾಯ್ಲೆಂಡ್, ದಕ್ಷಿಣ ಸುಡಾನ್, ಮೊಜಾಂಬಿಕ್ ಹಾಗೂ ಯುನೈಟೆಡ್ ಕಿಂಗ್ಡಂಮ್ನ ವಿದ್ಯಾರ್ಥಿಗಳು ಹಲ್ಲೆಗೆ ಒಳಗಾಗಿದ್ದಾರೆ. ಇವರು ವಡೋದರಾ ಜಿಲ್ಲೆಯ ಪಾರುಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಘಟನೆ ಬಗ್ಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ‘ಗುಜರಾತಿ ಭಾಷೆ ಬಾರದ ಕಾರಣ ವಾಗ್ವಾದ ನಡೆದು, ಹಲ್ಲೆ ನಡೆದಿದೆ’ ಎಂದು ಎಫ್ಐಆರ್ನಲ್ಲಿದೆ.

‘ನಾವು ಹತ್ತಿರದ ಗ್ರಾಮವೊಂದರ ದರ್ಗಾಗೆ ಭೇಟಿ ನೀಡಿದ್ದೆವು. ಈ ವೇಳೆ ನಮ್ಮ ಮೇಲೆ ದಾಳಿ ನಡೆದಿದೆ’ ಎಂದು ಕಾಲೇಜಿನ ಆಂತರಿಕ ತನಿಖೆ ವೇಳೆ ಗಾಯಗೊಂಡ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ. ‘ವಿದ್ಯಾರ್ಥಿಗಳು ಕಾಲೇಜಿನ ಹತ್ತಿರದ ಗ್ರಾಮವೊಂದರಲ್ಲಿರುವ ಎಟಿಎಂಗೆ ತೆರಳಿದ್ದರು. ಬಳಿಕ ಹತ್ತಿರದ ಕೆರೆ ಬಳಿಯೂ ಹೋಗಿದ್ದರು. ಹಾಗೆಯೇ ದರ್ಗಾಗೂ ಭೇಟಿ ನೀಡಿದ್ದರು’ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.

‘ದರ್ಗಾ ಬಳಿ ಸಿಗರೇಟು ಸೇದಬೇಡಿ, ಚಪ್ಪಲಿ ಹಾಕಬೇಡಿ ಎಂದು ಎಷ್ಟೇ ಬಾರಿ ಹೇಳಿದರು ವಿದ್ಯಾರ್ಥಿಗಳು ಕೇಳಲಿಲ್ಲ. ಇದರಿಂದ ಕುಪಿತಗೊಂಡ ಗುಂಪೊಂದು ಬ್ಯಾಟು, ಕೋಲುಗಳಿಂದ ಹಲ್ಲೆ ನಡೆಸಿತು’ ಎಂದು ಸ್ಥಳೀಯರು ಹೇಳಿದರು. ದಾಳಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.