ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ರಾನ್ಸ್‌ ಪತ್ರಕರ್ತೆಗೆ ನೋಟಿಸ್‌: ವಿಷಯ ಪ್ರಸ್ತಾಪ

Published : 26 ಜನವರಿ 2024, 19:40 IST
Last Updated : 26 ಜನವರಿ 2024, 19:40 IST
ಫಾಲೋ ಮಾಡಿ
Comments

ನವದೆಹಲಿ: ದೆಹಲಿಯಲ್ಲಿ ನೆಲೆಸಿರುವ ಫ್ರಾನ್ಸ್‌ ಮೂಲದ ಪತ್ರಕರ್ತೆಗೆ ನಿಯಮ ಉಲ್ಲಂಘನೆ ಆರೋಪದ ಮೇಲೆ ನೋಟಿಸ್‌ ನೀಡಿರುವ ವಿಷಯವನ್ನು ಫ್ರಾನ್ಸ್, ಭಾರತದೊಂದಿಗೆ ಪ್ರಸ್ತಾಪಿಸಿದೆ.

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರ ನವದೆಹಲಿ ಭೇಟಿ ವೇಳೆ ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಫ್ರಾನ್ಸ್ ಪತ್ರಕರ್ತೆ ವನೆಸ್ಸಾ ಡೊನಾಕ್‌ ಅವರಿಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಜನವರಿ 18 ರಂದು ನೋಟಿಸ್‌ ಜಾರಿಗೊಳಿಸಿತ್ತು. ನೋಟಿಸ್‌ಗೆ ಉತ್ತರಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

‘ಮ್ಯಾಕ್ರನ್‌ ಅವರ ಭೇಟಿಗೆ ಮುನ್ನ ಹಾಗೂ ಅವರು ಭಾರತಕ್ಕೆ ಬಂದಿಳಿದ ಬಳಿಕ ಫ್ರಾನ್ಸ್‌ ಅಧಿಕಾರಿಗಳು ಈ ವಿಷಯವನ್ನು ನಮ್ಮ ಜತೆ ಪ್ರಸ್ತಾಪಿಸಿದ್ದಾರೆ’ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಶುಕ್ರವಾರ ತಿಳಿಸಿದರು.

‘ದೇಶದ ನಿಯಮ ಮತ್ತು ನಿಬಂಧನೆಗಳ ಪಾಲನೆಗೆ ಸಂಬಂಧಿಸಿದ ವಿಚಾರದಲ್ಲಿ ನೋಟಿಸ್‌ ನೀಡಲಾಗಿದೆ. ಅವರ ಪತ್ರಿಕೋದ್ಯಮ ವೃತ್ತಿಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಫ್ರಾನ್ಸ್‌ಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT