ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ವಶದಲ್ಲಿ ಹಿಮಾಂಶು ಭಾವು ಸಹಚರ

Published 31 ಮೇ 2024, 15:28 IST
Last Updated 31 ಮೇ 2024, 15:28 IST
ಅಕ್ಷರ ಗಾತ್ರ

ನವದೆಹಲಿ: ತಲೆಮರೆಸಿಕೊಂಡಿರುವ ಭೂಗತಪಾತಕಿ ಹಿಮಾಂಶು ಭಾವು ಸಹಚರ ಎಂದು ಕರೆಯಲಾದ ವ್ಯಕ್ತಿಯೊಬ್ಬನನ್ನು ಅಮೆರಿಕದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಇಲ್ಲಿನ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಆತನ ಗುರುತು ಪತ್ತೆ ಮಾಡಲು ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಆತನನ್ನು ಭಾವು ಜೊತೆ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಾಹಿಲ್‌ ಕುಮಾರ್‌ ಎಂದು ಶಂಕಿಸಲಾಗಿದೆ. ಹಲವಾರು ಪ್ರಕರಣಗಳಲ್ಲಿ ಸಾಹಿಲ್‌ ಆಯೋಪಿಯಾಗಿದ್ದು, ಹರಿಯಾಣ ಪೊಲೀಸರು ಶೋಧ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಶದಲ್ಲಿರುವ ವ್ಯಕ್ತಿಯ ಗುರುತು ಬಹಿರಂಗವಾಗುತ್ತಿದ್ದಂತೆ ಆತನನ್ನು ದೇಶಕ್ಕೆ ಕರೆತರುವ ಪ್ರಕ್ರಿಯೆಗಳನ್ನು ಸಿಬಿಐ ಆರಂಭಿಸುತ್ತದೆ. ಆದರೆ, ಅದಕ್ಕೂ ಮೊದಲು ಅಮೆರಿಕದ ನ್ಯಾಯಾಲಯ ಆತನನ್ನು ಭಾರತಕ್ಕೆ ಕಳಿಸಲು ಅನುಮತಿಸಬೇಕು ಎಂದರು. 

ಸಾಹಿಲ್ ನಕಲಿ ಗುರುತಿನ ಪಾಸ್‌ಪೋರ್ಟ್‌ ಬಳಿಸಿ ಭಾರತದಿಂದ ಪರಾರಿಯಾಗಿದ್ದ, ಆತನ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT