ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅತ್ಯಂತ ಕಲುಷಿತ ನಗರ ಗಾಜಿಯಾಬಾದ್

Last Updated 6 ಅಕ್ಟೋಬರ್ 2022, 10:06 IST
ಅಕ್ಷರ ಗಾತ್ರ

ನವದೆಹಲಿ:ಕಳೆದವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ದೇಶದ ಅತ್ಯಂತ ಕಲುಷಿತ ನಗರ ಎನಿಸಿದೆ.

ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಶ್ರೇಣೀಕೃತ ಸ್ಪಂದನ ಕ್ರಿಯಾಯೋಜನೆ (ಜಿಆರ್‌ಎಪಿ–ಗ್ರಾಪ್‌) ರೂಪಿಸಲಾಗಿದೆ. ಆದರೆ, ಅದರ ನಿಯಮಗಳು ಗಾಜಿಯಾಬಾದ್‌ನಲ್ಲಿ ಸೂಕ್ತ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಅತ್ಯಂತ ಕಲುಷಿತ ನಗರವೆಂದು ಗುರುತಿಸಲಾಗಿದೆ ಎಂದು ವರದಿಗಳು ಪ್ರಕಟವಾಗಿವೆ.

ಉತ್ತರ ಪ್ರದೇಶದ ಪಶ್ಚಿಮಕ್ಕಿರುವ ದೊಡ್ಡ ನಗರವಾದ ಗಾಜಿಯಾಬಾದ್‌ನಲ್ಲಿ ಬುಧವಾರ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 248 ದಾಖಲಾಗಿತ್ತು. ಮಂಗಳವಾರ ನಗರದಎಕ್ಯೂಐ ಸರಾಸರಿ162 ರಷ್ಟಿತ್ತು. ನಗರದ ಪ್ರಮುಖ ಪ್ರದೇಶವಾಗಿರುವ ಲೋನಿಯಲ್ಲಿಎಕ್ಯೂಐ ಮತ್ತಷ್ಟು ಕಳಪೆ (293) ಇತ್ತು.

ಜಿಆರ್‌ಎಪಿ ನಿಯಮಗಳನ್ನು ಕಡ್ಡಾಯವಾಗಿಪಾಲಿಸುವಂತೆಲೋನಿಯ ಮುನಿಸಿಪಲ್‌ ಕೌನ್ಸಿಲ್‌ ಅಧಿಕಾರಿಗಳಿಗೆಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಸೂಚಿಸಿದೆ. ದಸರಾ ಸಂದರ್ಭದಲ್ಲಿ ನಡೆದ 'ರಾವಣ ದಹನ'ದ ಬಳಿಕ ಎನ್‌ಸಿಆರ್‌ನಲ್ಲಿ ವಾಯಮಾಲಿನ್ಯ ಪ್ರಮಾಣ ಏರಿಕೆಯಾಗಿರುವ ಬಗ್ಗೆಸಿಪಿಸಿಬಿ ಕಳವಳ ವ್ಯಕ್ತಪಡಿಸಿದೆ.

ಮಳೆಯಾದರೆಎಕ್ಯೂಐ ಸಾಧಾರಣ ಸ್ಥಿತಿಗೆ ಬರುವ ಸಾಧ್ಯತೆ ಇದೆ.

ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಗುರುಗ್ರಾಮ (ಎಕ್ಯೂಐ–238) ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಗ್ರೇಟರ್‌ ನೋಯಿಡಾ(ಎಕ್ಯೂಐ–234) ಇದೆ.

'ಗಾಳಿಯ ವೇಗ ಕಡಿಮೆ ಇರುವುದು. ರಸ್ತೆಗಳ ಮೇಲೆ ನೀರು ಬೀಳದಿರುವುದು ಹಾಗೂ ವಾಹನಗಳ ಹೊಗೆ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣಗಳಾಗಿವೆ' ಎಂದು ಸಿಪಿಸಿಬಿ ಪ್ರಾದೇಶಿಕ ಅಧಿಕಾರಿ ತಿಳಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ಕಳೆದ ಐದು ದಿನಗಳಲ್ಲಿ ಎಕ್ಯೂಐ ಕ್ರಮವಾಗಿ210, 207, 138, 162 ಹಾಗೂ 248 ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT