ಅಹಮದಾಬಾದ್: ಕಳೆದ ಎರಡು ವರ್ಷಗಳಲ್ಲಿ ಗುಜರಾತ್ ರಾಜ್ಯದಲ್ಲಿ 322 ಸಿಂಹಗಳು ಮೃತಪಟ್ಟಿವೆ, ಇವುಗಳಲ್ಲಿ 64 ಅಸಹಜ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಅರಣ್ಯ ಸಚಿವ ಅರ್ಜುನ್ ಮೋಡವಾಡಿಯ ವಿಧಾನಸಭೆಗೆ ಶುಕ್ರವಾರ ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕ ಶೈಲೇಶ್ ಪರಮಾರ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದರು.

2024ರಲ್ಲಿ 165, 2025ರಲ್ಲಿ 148 ಸಿಂಹಗಳು ಸಾವನ್ನಪ್ಪಿವೆ. ಕಳೆದ ಜನವರಿ ತಿಂಗಳಲ್ಲೇ 9 ಸಿಂಹಗಳು ಮೃತಪಟ್ಟಿವೆ. 2 ವರ್ಷಗಳಲ್ಲಿ 322 ಸಿಂಹಗಳು ಸಾವನ್ನಪ್ಪಿದ್ದು, ಈ ಪೈಕಿ 64 ಸಿಂಹಗಳು ಬಾವಿಗೆ ಬಿದ್ದಿವೆ ಅಥವಾ ವಾಹನ ಡಿಕ್ಕಿಯಾಗಿ ಮೃತಪಟ್ಟಿವೆ ಎಂದು ಸಚಿವರು ತಿಳಿಸಿದರು.

64 ಸಿಂಹಗಳಲ್ಲಿ 41 ಗಂಡು ಮತ್ತು ಹೆಣ್ಣು ಸಿಂಹಗಳು, 22 ಮರಿಗಳು ಸೇರಿವೆ. ಇವುಗಳಲ್ಲಿ ಒಂದನ್ನು ಗುರುತಿಸಲಾಗಿಲ್ಲ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸಿಂಹಗಳ ಅಸಹಜ ಸಾವು ತಡೆಗಟ್ಟಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅರಣ್ಯ ಪ್ರದೇಶದ ವಿವಿಧ ಕಡೆಗಳಲ್ಲಿ ಕಾಡು ಪ್ರಾಣಿಗಳ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪಶುವೈದ್ಯರನ್ನು ನೇಮಿಸಲಾಗಿದೆ. ತುರ್ತು ಚಿಕಿತ್ಸೆಗೆ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದೆ ಎಂದರು.

ಅಭಯಾರಣ್ಯ ಪ್ರದೇಶಗಳಲ್ಲಿ ಹೋಗುವ ರಸ್ತೆಗಳಲ್ಲಿ ವೇಗ ನಿಯಂತ್ರಕಗಳು ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ನಿಯಮಿತ ಪಾದಚಾರಿ ಗಸ್ತು ವ್ಯವಸ್ಥೆ ಮಾಡಲಾಗಿದೆ. ಅರಣ್ಯದಲ್ಲಿರುವ ತೆರೆದ ಬಾವಿಗಳಿಗೆ ಅಡ್ಡಗೋಡೆ ನಿರ್ಮಿಸಲಾಗಿದೆ. ಅಭಯಾರಣ್ಯದಲ್ಲಿ ಸಾಗುವ ರೈಲು ಹಳಿಗಳ ಎರಡೂ ಬದಿಗಳಲ್ಲಿ ಬೇಲಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಸಿಂಹಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಅಲ್ಲಲ್ಲಿ ಅತ್ಯಾಧುನಿಕ ನಿಗಾ ಘಟಕಗಳ ಸ್ಥಾಪನೆ, ಸಿಂಹಗಳು ಹೆಚ್ಚು ನೆಲೆಸಿರುವ ಪ್ರದೇಶಗಳಲ್ಲಿ ಗಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಕಾಡು ಪ್ರಾಣಿಗಳ ರಕ್ಷಣೆಗಾಗಿ ತ್ವರಿತ ಕಾರ್ಯಾಚರಣೆಗೆ ತಂಡಗಳನ್ನು ರಚಿಸಲಾಗಿದೆ. ಬೇಟೆ ತಡೆಯಲು ಅರಣ್ಯ ಸಿಬ್ಬಂದಿಯಿಂದ 24 ಗಂಟೆಗಳ ಗಸ್ತು ವ್ಯವಸ್ಥೆ ಮಾಡಲಾಗಿದೆ. ಅಭಯಾರಣ್ಯ ಪ್ರದೇಶದ ನಾಲ್ಕು ತಪಾಸಣೆ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

2025ರ ಗಣತಿ ಪ್ರಕಾರ ಗುಜರಾತ್ನ ಗಿರ್ ವನ್ಯಜೀವಿ ಅಭಯಾರಣ್ಯ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಒಟ್ಟು 891 ಸಿಂಹಗಳು ವಾಸಿಸುತ್ತಿವೆ. ಇದರಲ್ಲಿ 255 ಗಂಡು, 405 ಹೆಣ್ಣು ಸಿಂಹಗಳು ಹಾಗೂ 231 ಮರಿಗಳು ಸೇರಿವೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.