ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರ್‌ ಅರಣ್ಯದಲ್ಲಿ ಏಳು ಸಿಂಹಗಳ ಸಾವು

Last Updated 2 ಅಕ್ಟೋಬರ್ 2018, 18:10 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ರಾಜ್ಯದ ಗಿರ್‌ ಅರಣ್ಯ ಪ್ರದೇಶದಿಂದ ಚಿಕಿತ್ಸೆಗೆಂದು ಸಂರಕ್ಷಣಾ ಕೇಂದ್ರಕ್ಕೆ ಕರೆತರಲಾಗಿದ್ದ ಏಳು ಸಿಂಹಗಳು ಮೃತಪಟ್ಟಿವೆ.

ಸೆ. 12ರ ಬಳಿಕ ಅಭಯಾರಣ್ಯದಲ್ಲಿ ಮೃತಪಟ್ಟ ಸಿಂಹಗಳ ಸಂಖ್ಯೆ ಒಟ್ಟು 21.

ಇವುಗಳಲ್ಲಿ ಬಹುತೇಕ ಸಿಂಹಗಳ ಸಾವಿಗೆ ವೈರಸ್‌ ಸೋಂಕು ಕಾರಣ ಎಂದು ಸರ್ಕಾರ ಹೇಳಿದೆ. ಆದರೆ ಸಾವಿಗೆ ಕಾರಣವಾಗಿರುವ ವೈರಸ್‌ ಯಾವುದು ಎಂಬುದು ಇನ್ನೂ ಪತ್ತೆಯಾಗಿಲ್ಲ.

ನಾಲ್ಕು ಸಿಂಹಗಳಲ್ಲಿ ವೈರಸ್‌ ಸೋಂಕು ಪತ್ತೆಯಾಗಿದ್ದು, ಆರು ಸಿಂಹಗಳಲ್ಲಿ ಪ್ರೊಟೊಜೋವಾ ಸೋಂಕು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪುಣೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಯಲ್ಲಿ (ಎನ್‌ಐವಿ) ಸಿಂಹಗಳ ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗಿದ್ದು, ಯಾವ ಬಗೆಯ ಸೋಂಕು ಎಂಬುದನ್ನು ಗುರುತಿಸಲು ಕೆಲ ಸಮಯ ಬೇಕಾಗುತ್ತದೆ’ ಎಂದು ಜುನಾಗಡ್‌ ವನ್ಯಜೀವಿ ಪ್ರದೇಶದಅರಣ್ಯ ಸಂರಕ್ಷಣಾಧಿಕಾರಿ ಡಿ.ಟಿ. ವಸಾವಡ ತಿಳಿಸಿದ್ದಾರೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಸರ್ಕಾರ ಅಮೆರಿಕದಿಂದ ಜೌಷಧ ಮತ್ತು ಲಸಿಕೆಗಳನ್ನು ತರಿಸಲು ನಿರ್ಧರಿಸಿದೆ.

2015ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಗಿರ್‌ ಅರಣ್ಯ ಪ್ರದೇಶವು 520 ಸಿಂಹಗಳ ಆವಾಸಸ್ಥಾನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT