ನವದೆಹಲಿ: ಸುಂಕ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯಗಳು (ಡಿಆರ್ಐ) ಕಳೆದ 10 ವರ್ಷಗಳಲ್ಲಿ ದೇಶದಾದ್ಯಂತ ಸುಮಾರು 29 ಸಾವಿರ ಪ್ರಕರಣಗಳಲ್ಲಿ ₹9,661.60 ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿವೆ.

ಚಿನ್ನ ವಶಪಡಿಸಿಕೊಂಡ ಪ್ರಕರಣಗಳು ತಮಿಳುನಾಡು, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಹೆಚ್ಚು ಕಂಡುಬಂದಿವೆ. 2012ರಿಂದ 2022ರ ಜೂನ್ ಅವಧಿಯಲ್ಲಿ 29,506 ಪ್ರಕರಣಗಳಲ್ಲಿಡಿಆರ್ಐ ಚಿನ್ನವಶಪಡಿಸಿಕೊಂಡಿದೆ.ಈ ಪೈಕಿ 1,543 ಪ್ರಕರಣಗಳು ಈ ವರ್ಷದ ಮೊದಲ ಆರು ತಿಂಗಳುಗಳಲ್ಲಿ ನಡೆದಿವೆ.

ಹಣಕಾಸು ಸಚಿವಾಲಯವು ಲೋಕಸಭೆಯಲ್ಲಿ ಇತ್ತೀಚೆಗೆ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಅತಿ ಹೆಚ್ಚುಚಿನ್ನಕಳ್ಳಸಾಗಣೆಪ್ರಕರಣಗಳು ವರದಿಯಾದ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನ (7,722 ಪ್ರಕರಣ) ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (7,047) ಹಾಗೂ ಕೇರಳ (5,080) ಇವೆ.

ಈ ವರ್ಷದ ಮೊದಲ ಆರು ತಿಂಗಳಲ್ಲಿ ಪತ್ತೆ ಮಾಡಲಾದಚಿನ್ನಕಳ್ಳಸಾಗಣೆಪ್ರಕರಣಗಳಲ್ಲಿ ಕೇರಳ (470) ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ತಮಿಳುನಾಡು (435) ಹಾಗೂ ಮಹಾರಾಷ್ಟ್ರ (177) ಇವೆ. ಇದೇ ಅವಧಿಯಲ್ಲಿಕರ್ನಾಟಕದಲ್ಲಿ 1,608 ಪ್ರಕರಣಗಳು ವರದಿಯಾಗಿದ್ದು, ಚಿನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.2018ರ ಅವಧಿಯಲ್ಲಿ ದೇಶದಲ್ಲೇ ಅತೀ ಹೆಚ್ಚು ಚಿನ್ನ ಕಳ್ಳಸಾಗಣೆಯ ಪ್ರಕರಣಗಳು (1,608) ಕರ್ನಾಟಕದಲ್ಲಿ ದಾಖಲಾಗಿದ್ದವು.

ಕಳೆದ 10 ವರ್ಷಗಳಲ್ಲಿಚಿನ್ನಕಳ್ಳಸಾಗಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅನ್ವಯ 15 ಪ್ರಕರಣ ದಾಖಲಿಸಿದೆ. ವಿದೇಶಿ ವಿನಿಮಯ ಕಾಯ್ದೆ ಅನ್ವಯ 29 ಪ್ರಕರಣ ದಾಖಲಾಗಿವೆ.

ವಿದೇಶಿ ವಿನಿಮಯ ಕಾಯ್ದೆ ಅಡಿಯಲ್ಲಿ ₹10.5 ಕೋಟಿ ಮೌಲ್ಯದ 26.97 ಕೆ.ಜಿಚಿನ್ನ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ₹18.88 ಕೋಟಿ ಮೌಲ್ಯದಚಿನ್ನವಶಪಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ನಾಲ್ಕು ಪ್ರಕರಣಗಳ ಸಂಬಂಧ ಚಾರ್ಜ್ಶೀಟ್ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.