ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲೇ ಸ್ಟೋರ್‌ನಲ್ಲಿ ಭಾರತೀಯ ಆ್ಯಪ್‌ಗಳ ಮರುಸೇರ್ಪಡೆಗೆ ಗೂಗಲ್ ಒಪ್ಪಿದೆ: ವೈಷ್ಣವ್

Published 5 ಮಾರ್ಚ್ 2024, 9:52 IST
Last Updated 5 ಮಾರ್ಚ್ 2024, 9:52 IST
ಅಕ್ಷರ ಗಾತ್ರ

ನವದೆಹಲಿ: ಪ್ಲೇ ಸ್ಟೋರ್‌ನಿಂದ ತೆಗೆಯಲಾಗಿರುವ ಭಾರತೀಯ ಆ್ಯಪ್‌ಗಳನ್ನು ಮರುಸೇರ್ಪಡೆಗೊಳಿಸಲು ಗೂಗಲ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಪಾವತಿ ವಿವಾದವನ್ನೂ ಬಗೆಹರಿಸಲು ಯತ್ನಿಸುವುದಾಗಿಯೂ ಅವರು ಹೇಳಿದ್ದಾರೆ.

ಗೂಗಲ್ ಮತ್ತು ಸ್ಟಾರ್ಟಪ್‌ಗಳು ಈ ಕುರಿತಂತೆ ಸರ್ಕಾರದ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿವೆ. ಈ ಹಿನ್ನೆಲೆಯಲ್ಲಿ ಪ್ಲೇ ಸ್ಟೋರ್‌ನಿಂದ ತೆಗೆದಿರುವ ಭಾರತೀಯ ಆ್ಯಪ್‌ಗಳನ್ನು ಸೇರ್ಪಡೆ ಮಾಡಲು ಗೂಗಲ್ ಒಪ್ಪಿದೆ ಎಂದು ಅವರು ಹೇಳಿದ್ದಾರೆ.

‘ಗೂಗಲ್ ಸಂಸ್ಥೆಯು ನಮ್ಮ ತಂತ್ರಜ್ಞಾನ ಅಭಿವೃದ್ಧಿಯನ್ನು ಬೆಂಬಲಿಸುತ್ತಿದೆ. ಮುಂದಿನ ದಿನಗಳಲ್ಲಿ ಗೂಗಲ್ ಮತ್ತು ಸ್ಟಾರ್ಟಪ್‌ ಕಂಪನಿಗಳು ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಲಿವೆ’ ಎಂದು ಭಾವಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.

ಸೇವಾ ಶುಲ್ಕ ಭರಿಸಲು ಹಿಂದೇಟು ಹಾಕಿದ್ದರಿಂದ ಮಾರ್ಚ್ 1 ರಂದು bharat Matrimony, jeevansathi, Naukri, 99 acres ಸೇರಿ 100 ಆ್ಯಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿತ್ತು.

ಶೇ 11ರಿಂದ ಶೇ 25ರಷ್ಟು ಶುಲ್ಕ ಭರಿಸಲು ಒಪ್ಪಿಗೆ ಹಾಗೂ ಪ್ಲೇ ಸ್ಟೋರ್‌ನಿಂದ ಹೊರಗೆ ವಹಿವಾಟು ನಡೆಸುವ ಬಗ್ಗೆ ಸಮ್ಮತಿಸಿರುವ ಕಂಪನಿಗಳ ಆ್ಯಪ್‌ಗಳನ್ನು ನಾಲ್ಕು ದಿನಗಳ ಹಿಂದೆಯೇ ಮರುಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT