ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Google Pay– PhonePe ಬಾಹುಳ್ಯ: ಲೋಕಸಭೆಯಲ್ಲಿ ಸಂಸದೆ ಸುಪ್ರಿಯಾ ಸುಳೆ ಅಸಮಾಧಾನ

ಗೂಗಲ್ ಪೇ ಮತ್ತು ಫೋನ್‌ ಪೇ ಅಂತಹ ವಿದೇಶಿ ಮೂಲದ ಯುಪಿಐ ಅಪ್ಲಿಕೇಶನ್‌ಗಳು ನಮಗೆ ಎಷ್ಟು ಸುರಕ್ಷಿತ ಎಂದು ಆತಂಕ
Published 10 ಫೆಬ್ರುವರಿ 2024, 5:50 IST
Last Updated 10 ಫೆಬ್ರುವರಿ 2024, 5:50 IST
ಅಕ್ಷರ ಗಾತ್ರ

ನವದೆಹಲಿ: ಗೂಗಲ್ ಪೇ ಮತ್ತು ಫೋನ್‌ ಪೇ ಅಂತಹ ವಿದೇಶಿ ಮೂಲದ ಯುಪಿಐ ಅಪ್ಲಿಕೇಶನ್‌ಗಳು ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಪ್ರಭಾವಶಾಲಿಯಾಗಿ ಬೆಳೆದಿದ್ದು, ಇವುಗಳ ಸಂಭವನೀಯ ಅಪಾಯ ತಡೆಗಟ್ಟಲು ಕೇಂದ್ರ ಸರ್ಕಾರ ಏನು ಕ್ರಮಕೈಗೊಂಡಿದೆ? ಎಂದು ಶುಕ್ರವಾರ ಲೋಕಸಭೆಯಲ್ಲಿ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರಶ್ನಿಸಿದ್ದಾರೆ.

ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಶ್ವೇತಪತ್ರದ ಚರ್ಚೆ ಹಿನ್ನೆಲೆಯಲ್ಲಿ ಅವರು ಈ ಆತಂಕ ಹೊರ ಹಾಕಿದ್ದಾರೆ.

ಗೂಗಲ್ ಪೇ ಮತ್ತು ಫೋನ್‌ ಪೇ ಭಾರತದ ಯುಪಿಐ ಆಧರಿತ ಆರ್ಥಿಕ ವಹಿವಾಟಿನಲ್ಲಿ ಶೇ.88ರಷ್ಟು ಪಾಲನ್ನು ಹೊಂದಿವೆ ಎಂದು ಇತ್ತೀಚಿಗೆ ಕೆಲ ವರದಿಗಳು ಹೇಳಿದ್ದವು.

ಡಿಜಿಟಲ್ ಆರ್ಥಿಕತೆಗೆ ವಿದೇಶಿ ಮೂಲದ ಗೂಗಲ್ ಪೇ ಮತ್ತು ಫೋನ್‌ ಪೇಗಳು ಟೈಮ್‌ ಬಾಂಬ್‌ಗಳಂತೆ ಎಚ್ಚರಿಕೆ ಕರೆ ಗಂಟೆಗಳಾಗಿದ್ದು, ಇದು ಭಾರತ ಆರ್ಥಿಕತೆಗೆ ಯಾವಾಗ ಬೇಕಾದರೂ ಅಪಾಯ ತಂದೊಡ್ಡಬಹುದು ಎಂದು ಹೇಳಿದ್ದಾರೆ.

‘ಈ ಆ್ಯಪ್‌ಗಳನ್ನು ಬಳಸುವವರ ಸಂಖ್ಯೆಗಿಂತ ಕೇಂದ್ರ ಸರ್ಕಾರದ BHIM ಆ್ಯಪ್ ಬಳಸುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಡಿಜಿಟಲ್ ಆರ್ಥಿಕತೆ ಸುರಕ್ಷತೆ ಕುರಿತಂತೆ ಸರ್ಕಾರ ಏನು ಕ್ರಮ ಕೈಗೊಂಡಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಗೂಗಲ್ ಪೇ ಗೂಗಲ್ ಒಡೆತನ ಹೊಂದಿದ್ದರೆ, ಪೋನ್‌ ಪೇ ವಾಲ್‌ಮಾರ್ಟ್‌ ಕಂಪನಿಯ ಒಡೆತನ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT