ಪೌರತ್ವ ಹೊಂದಲು ಬಯಸುವವರ ತಂದೆ, ಅಜ್ಜ ಅಥವಾ ಮುತ್ತಜ್ಜಂದಿರಲ್ಲಿ (ಮೂರು ತಲೆಯಾರಿನಲ್ಲಿ ಯಾವುದೇ ಒಂದು ತಲೆಮಾರು) ಯಾರಾದರೂ ಈ ದೇಶದಲ್ಲಿ ನೆಲೆಸಿದ್ದ ಕುರಿತು ಕೇಂದ್ರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರ ಅಥವಾ ಅರೆ ನ್ಯಾಯಾಂಗ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿದ್ದರೆ, ಅಂಥವರು ಪೌರತ್ವ ಕೋರಿ ಸಲ್ಲಿಸುವ ಅರ್ಜಿಯು ಮಾನ್ಯತೆ ಪಡೆಯಲಿದೆ.