ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸ್ವ–ಸಹಾಯ ಗುಂಪುಗಳಿಗೆ ಕೃಷಿ ಡ್ರೋನ್‌ : ಪ್ರಧಾನಿ ಮೋದಿ ಭರವಸೆ

Published 15 ಆಗಸ್ಟ್ 2023, 7:42 IST
Last Updated 15 ಆಗಸ್ಟ್ 2023, 7:42 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಉದ್ದೇಶಗಳಿಗಾಗಿ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವ ಯೋಜನೆಯನ್ನು ಶೀಘ್ರದಲ್ಲೇ ಸರ್ಕಾರ ಜಾರಿಗೆ ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇಲ್ಲಿನ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ದೇಶದಲ್ಲಿ ಮಹಿಳಾ ಕೇಂದ್ರಿತ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ವಿಮಾನಯಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಗಮನಾರ್ಹ’ ಎಂದರು.

ದೇಶದಲ್ಲಿ ಸುಮಾರು 10 ಕೋಟಿ ಮಹಿಳೆಯರು ಸ್ವ–ಸಹಾಯ ಗುಂಪುಗಳಲ್ಲಿ ಸಕ್ರಿಯರಾಗಿದ್ದಾರೆ. ಡ್ರೋನ್ ನೀಡುವ ಯೋಜನೆಯನ್ನು ಆರಂಭದಲ್ಲಿ 15 ಸಾವಿರ ಮಹಿಳಾ ಸ್ವ–ಸಹಾಯ ಗುಂಪುಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಕಾರ್ಮಿಕರಿಗೆ ನೆರವಾಗಲು ವಿಶ್ವಕರ್ಮ ಯೋಜನೆ

ಕಾರ್ಮಿಕರಿಗೆ ನೆರವಾಗುವಂತೆ ₹13 ಕೋಟಿಯಿಂದ ₹15 ಕೋಟಿ ವೆಚ್ಚದಲ್ಲಿ ‘ವಿಶ್ವಕರ್ಮ ಯೋಜನೆ’ಯನ್ನು ಮುಂದಿನ ತಿಂಗಳಿಂದ ಪ್ರಾರಂಭಿಸಲಾಗುವುದು ಎಂದು ಮೋದಿ ಹೇಳಿದರು.

ಈ ಯೋಜನೆಯು ವಿಶೇಷವಾಗಿ ಕ್ಷೌರಿಕರು, ಅಕ್ಕಸಾಲಿಗರು, ಮಡಿವಾಳ ವೃತ್ತಿಯವರು ಸೇರಿದಂತೆ ಸಾಂಪ್ರದಾಯಿಕ ಕಸಬುದಾರರಿಗೆ ನೆರವಾಗಲಿದೆ ಎಂದು ಮೋದಿ ಹೇಳಿದರು.

ನಗರದಲ್ಲಿ ಸ್ವಂತ ಮನೆ ಹೊಂದಲು ಅವಕಾಶ

ನಗರ ಪ್ರದೇಶದಲ್ಲಿ ಸ್ವಂತ ಸೂರು ಹೊಂದಲು ಕನಸು ಕಾಣುತ್ತಿರುವವರಿಗೆ ಸರ್ಕಾರ ಶ್ರೀಘ್ರದಲ್ಲೇ ಬ್ಯಾಂಕ್‌ ಸಾಲ ಯೋಜನೆಯೊಂದನ್ನು ಜಾರಿಗೆ ತರಲಿದೆ.

ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಮಧ್ಯಮ ಕುಟುಂಬಗಳಿಗೆ ಈ ಯೋಜನೆ ಸಹಾಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT