ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ದೇವಾನ್ ಬಾಗ್ ಪ್ರದೇಶದಲ್ಲಿ ನೂತನವಾಗಿ ತೆರೆಯಲಾಗಿದ್ದ ಮದ್ಯದಂಗಡಿ ಮೇಲೆ ಮಂಗಳವಾರ ಶಂಕಿತ ಉಗ್ರರು ಗ್ರೆನೆಡ್ ಎಸೆದಿದ್ದು, ಘಟನೆಯಲ್ಲಿ ಅಂಗಡಿಯ ನೌಕರರೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
‘ಘಟನೆಯಲ್ಲಿ ವೈನ್ ಶಾಪ್‌ನ ನಾಲ್ವರು ಗಾಯಗೊಂಡಿದ್ದು, ತೀವ್ರ ಗಾಯಗೊಂಡಿದ್ದ ಒಬ್ಬರು ಮೃತಪಟ್ಟರು. ದಾಳಿಯ ನಂತರ ದೇವಾನ್ ಬಾಗ್ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಸಿವೆ’ ಎಂದು ಪೊಲೀಸರು ತಿಳಿಸಿದರು.