ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ | ಹುಲಿಗಳ ಸಂಚಾರಕ್ಕೆ ಅಡ್ಡಿ: ತಡೋಬಾ ಅಂಧಾರಿಯಲ್ಲಿ ಸಫಾರಿ ಸ್ಥಗಿತ

Published 28 ಮೇ 2024, 6:35 IST
Last Updated 28 ಮೇ 2024, 6:35 IST
ಅಕ್ಷರ ಗಾತ್ರ

ಚಂದ್ರಾಪುರ (ಮಹಾರಾಷ್ಟ್ರ): ಹುಲಿಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕೆ ಮಹಾರಾಷ್ಟ್ರದ ತಡೋಬಾ ಅಂಧಾರಿ ಹುಲಿ ಸಂರಕ್ಷಣಾ ಮೀಸಲು ಪ್ರದೇಶದಲ್ಲಿ 10 ಮಂದಿ ಮಾರ್ಗದರ್ಶಕರನ್ನು ಅಮಾನತು ಮಾಡಲಾಗಿದ್ದು, ಸಫಾರಿ ಸೇವೆಯನ್ನೂ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೇ 17 ರಂದು ಜಂಗಲ್ ಸಫಾರಿ ವೇಳೆ ಚಂದ್ರಾಪುರದ ಮೀಸಲು ಪ್ರದೇಶದಲ್ಲಿ ಹುಲಿ T-114 ರ ಸಂಚಾರಕ್ಕೆ ಕೆಲವು ವಾಹನಗಳು ಅಡ್ಡಿಪಡಿಸಿವೆ ಎನ್ನಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ 10 ಜನ ಮಾರ್ಗದರ್ಶಿಗಳು ಮತ್ತು 10 ಸಫಾರಿ ವಾಹನಗಳ ಸೇವೆಗಳನ್ನು ಭಾನುವಾರದಿಂದ ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಮೀಸಲು ಪ್ರದೇಶದ ನಿರ್ದೇಶಕ ಕುಶಾಗ್ರಾ ಪಾಠಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂತಹ ಘಟನೆಗಳು ಹೆಚ್ಚಾಗಿ ಸಂಭವಿಸುವ ಮೀಸಲು ಪ್ರದೇಶದ ಕೆಲವು ಪ್ರದೇಶಗಳಲ್ಲಿ ಪ್ರವಾಸಿಗರ ಭೇಟಿ ನಿಷೇಧಿಸಲು ಆಡಳಿತವು ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT