ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಪ್ರವಾಹದಲ್ಲಿ ಸಿಲುಕಿದ ಬಸ್, 40 ಪ್ರಯಾಣಿಕರ ರಕ್ಷಣೆ

Published 22 ಜುಲೈ 2023, 14:14 IST
Last Updated 22 ಜುಲೈ 2023, 14:14 IST
ಅಕ್ಷರ ಗಾತ್ರ

ಬಿಜ್ನೋರ್ : 40 ಪ್ರಯಾಣಿಕರಿದ್ದ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಶನಿವಾರ ಉತ್ತರ ಪ್ರದೇಶ-ಉತ್ತರಾಖಂಡ್ ಗಡಿ ಸೇತುವೆ ಮೂಲಕ ಹಾದುಹೋಗುವಾಗ ನದಿ ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡಿತು. 

ಎಲ್ಲಾ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಮತ್ತು ಭಾರಿ ಯಂತ್ರಗಳ ಸಹಾಯದಿಂದ ಬಸ್ಸನ್ನು ಅಲ್ಲಿಂದ ಹೊರ ತರಲಾಗಿದೆ ಎಂದು ನಜೀಬಾಬಾದ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಭಾರಿ ಮಳೆಯಿಂದಾಗಿ ಕೋಟಾವಾಲಿ ನದಿಯ ನೀರಿನ ಮಟ್ಟ  ಶನಿವಾರ ಮುಂಜಾನೆ ಏರಿತು. ಮಂದವಾಲಿ ಪ್ರದೇಶದಲ್ಲಿ ಬಸ್ ಪ್ರವಾಹದಲ್ಲಿ ಸಿಲುಕಿಕೊಂಡಿತ್ತು. ಸಾಕಷ್ಟು ಪ್ರಯತ್ನದ ನಂತರ, ಜೆಸಿಬಿ ಯಂತ್ರಗಳ ಸಹಾಯದಿಂದ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಸಿಒ ಹೇಳಿದ್ದಾರೆ.   ರೂಪೇದಿಹಾದಿಂದ ಹರಿದ್ವಾರಕ್ಕೆ ಬಸ್  ಪ್ರಯಾಣಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT