ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯು ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಕಿತ್ತೊಗೆಯಲಿದೆ: ರಾಜನಾಥ ಸಿಂಗ್

Published 27 ಡಿಸೆಂಬರ್ 2023, 10:52 IST
Last Updated 27 ಡಿಸೆಂಬರ್ 2023, 10:52 IST
ಅಕ್ಷರ ಗಾತ್ರ

ರಜೌರಿ: ‘ಸೇನೆಯು ಜಮ್ಮು– ಕಾಶ್ಮೀರದಲ್ಲಿ ಬೇರೂರಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ ಎಂಬ ನಂಬಿಕೆಯಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದರು.

ಸೇನಾ ವಾಹನಗಳ ಮೇಲೆ ಉಗ್ರರ ಹಠಾತ್ ದಾಳಿಗೆ ನಾಲ್ವರು ಯೋಧರು ಹುತಾತ್ಮರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಾಜನಾಥ್ ಸಿಂಗ್ ಜಮ್ಮು–ಕಾಶ್ಮೀರಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದಾರೆ.

ಈ ವೇಳೆ ಸೇನೆಯ ಶೌರ್ಯ ಸಾಹಸಗಳನ್ನು ಶ್ಲಾಘಿಸಿದ ಅವರು, ‘ಜಮ್ಮು–ಕಾಶ್ಮೀರದಲ್ಲಿನ ಭಯೋತ್ಪಾದಕ ಚಟುವಟಿಕೆಗಳಿಗೆ ಮುಕ್ತಾಯ ಹಾಡಬೇಕಿದೆ. ಈ ನಿಟ್ಟಿನಲ್ಲಿಯೇ ಸೇನೆಯು ಕೆಲಸ ಮಾಡಬೇಕಿದೆ. ಈ ವಿಷಯದಲ್ಲಿ ನೀವು ಗೆಲುವು ಸಾಧಿಸುತ್ತೀರಿ ಎಂಬ ನಂಬಿಕೆ ನನಗಿದೆ’ ಎಂದರು.

ಸತ್ತವರನ್ನು ಮರಳಿ ತರುತ್ತಾರೆಯೇ?: ಫಾರೂಕ್‌ ಅಬ್ದುಲ್ಲಾ

ಜಮ್ಮು–ಕಾಶ್ಮೀರಕ್ಕೆ ರಕ್ಷಣಾ ಸಚಿವರು ಭೇಟಿ ನೀಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ‘ರಕ್ಷಣಾ ಸಚಿವರ ಭೇಟಿಯಿಂದ ನನಗೆ ಯಾವ ನಿರೀಕ್ಷೆಗಳಿಲ್ಲ. ಸತ್ತ ಮೂವರು ನಾಗರಿಕರನ್ನು ಅವರು(ರಾಜನಾಥ್) ಮರಳಿ ತರುತ್ತಾರೆಯೇ? ಆ ಶಕ್ತಿ ಅವರಿಗಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

‘ನಾಗರಿಕರ ಹತ್ಯೆಯಂತಹ ಘಟನೆಗಳು ಮರುಕಳಿಸುವುದಿಲ್ಲ ಎಂಬ ನಂಬಿಕೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT