ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳ ನೇಮಕ: ಹೈಕೋರ್ಟ್‌ ಕೊಲಿಜಿಯಂನ 81 ಪ್ರಸ್ತಾವಗಳ ಪರಿಶೀಲನೆ

Published 15 ಡಿಸೆಂಬರ್ 2023, 16:16 IST
Last Updated 15 ಡಿಸೆಂಬರ್ 2023, 16:16 IST
ಅಕ್ಷರ ಗಾತ್ರ

ನವದೆಹಲಿ: ‘ನ್ಯಾಯಮೂರ್ತಿಗಳ ನೇಮಕಕ್ಕಾಗಿ ವಿವಿಧ ಹೈಕೋರ್ಟ್‌ಗಳ ಕೊಲಿಜಿಯಂಗಳು ಕಳುಹಿಸಿರುವ 123 ಪ್ರಸ್ತಾವಗಳಲ್ಲಿ 81 ವಿವಿಧ ಹಂತದಲ್ಲಿ ಪರಿಶೀಲನೆಯಲ್ಲಿದೆ’ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿತು. 

ಡಿಸೆಂಬರ್ 12, 23ರಲ್ಲಿ ಇದ್ದಂತೆ ಇತರೆ 42 ಪ್ರಸ್ತಾವಗಳು ಸುಪ್ರೀಂ ಕೋರ್ಟ್‌ನ ಕೊಲಿಜಿಯಂನ ಪರಿಶೀಲನೆಯಲ್ಲಿವೆ ಎಂದು ಕಾನೂನು ಸಚಿವ ಅರ್ಜುನ್‌ ಆಮ್‌ ಮೇಘವಾಲ್‌ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

ವಿವಿಧ ಹೈಕೋರ್ಟ್‌ಗಳಲ್ಲಿ 201 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇದ್ದು, ಇವುಗಳ ಸಂಬಂಧ ಹೈಕೋರ್ಟ್‌ ಕೊಲಿಜಿಯಂನಿಂದ ಇನ್ನೂ ಶಿಫಾರಸು ಬರಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

ಕಾನೂನು ಸಚಿವಾಲಯದ ವೆಬ್‌ಸೈಟ್‌ನ ಅನುಸಾರ ಡಿಸೆಂಬರ್‌ 1ರಲ್ಲಿ ಇದ್ದಂತೆ 25 ಹೈಕೋರ್ಟ್‌ಗಳಲ್ಲಿ ಮಂಜೂರಾದ ನ್ಯಾಯಮೂರ್ತಿಗಳ ಒಟ್ಟು ಹುದ್ದೆಗಳು 1,114. ಇವುಗಳಲ್ಲಿ 324 ಸ್ಥಾನಗಳು ಖಾಲಿ ಇವೆ.

ಪ್ರಸ್ತುತ ನಿಯಮಗಳ ಅನುಸಾರ, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಖಾಲಿ ಹುದ್ದೆಗಳ ಭರ್ತಿಗೆ ಪ್ರಸ್ತಾವ ಕಳುಹಿಸುತ್ತಾರೆ. ಹೈಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡುವ ಹೆಸರುಗಳನ್ನು ಕೇಂದ್ರ ಸರ್ಕಾರದ ಅಭಿಪ್ರಾಯದೊಂದಿಗೆ ಸುಪ್ರೀಂ ಕೋರ್ಟ್‌ ಕೊಲಿಜಿಯಂನ ಪರಿಗಣನೆಗೆ ಕಳುಹಿಸಲಾಗುತ್ತದೆ. ಈ ಪೈಕಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕೆಲವು ಹೆಸರುಗಳಿಗೆ ಶಿಫಾರಸು ಮಾಡಲಿದ್ದು, ಉಳಿದವನ್ನು ಮರಳಿ ಹೈಕೋರ್ಟ್‌ಗಳ ಕೊಲಿಜಿಯಂಗಳಿಗೆ ಕಳುಹಿಸಲಾಗುತ್ತದೆ. 

ಆ ನಂತರ ಶಿಫಾರಸುಗಳನ್ನು ಆಧರಿಸಿ ಕೇಂದ್ರ ಸರ್ಕಾರ ಕ್ರಮವಹಿಸಲಿದ್ದು, ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ. ಕೆಲವು ಹೆಸರುಗಳನ್ನು ಮರಳಿ ಪರಿಗಣಿಸಲು ಸುಪ್ರೀಂ ಕೋರ್ಟ್‌ನ ಕೊಲಿಜಿಯಂಗೆ ಹಿಂದಿರುಗಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT