ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೊಡಾಫೋನ್‌ ಐಡಿಯಾಗೆ ₹ 1,128 ಕೋಟಿ ಮರುಪಾವತಿಸಲು ಬಾಂಬೆ ಹೈಕೋರ್ಟ್‌ ಆದೇಶ

Published 9 ನವೆಂಬರ್ 2023, 15:56 IST
Last Updated 9 ನವೆಂಬರ್ 2023, 15:56 IST
ಅಕ್ಷರ ಗಾತ್ರ

ಮುಂಬೈ: 2016–17ನೇ ಅಂದಾಜು ವರ್ಷಕ್ಕೆ ಸಂಬಂಧಿಸಿ ಪಾವತಿ ಮಾಡಲಾದ ₹ 1,128 ಕೋಟಿ ತೆರಿಗೆ ಮೊತ್ತವನ್ನು ವೊಡಾಫೋನ್‌ ಐಡಿಯಾ ಕಂಪನಿಗೆ ಮರುಪಾವತಿಸುವಂತೆ ಆದಾಯ ತೆರಿಗೆ ಇಲಾಖೆಗೆ ಬಾಂಬೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

‘ತೆರಿಗೆ ಪಾವತಿ ಕುರಿತಂತೆ ಇಲಾಖೆಯು ಕಳೆದ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿದೆ. ಇದು ಅವಧಿ ಮೀರಿದ ಆದೇಶವಾಗಿದ್ದು, ಸಮರ್ಥನೀಯವೂ ಅಲ್ಲ’ ಎಂದು ಹೈಕೋರ್ಟ್‌ ಬುಧವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ಕೆ.ಆರ್‌.ಶ್ರೀರಾಮ್ ಹಾಗೂ ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿದೆ.

‘ಈ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಯು ಅಸಡ್ಡೆಯಿಂದ ವರ್ತಿಸಿದ್ದಾರೆ. ತೆರಿಗೆ ನಿರ್ಧರಣೆಗೆ ಸಂಬಂಧಿಸಿದ ಆದೇಶವನ್ನು ನಿಗದಿತ 30 ದಿನಗಳ ಒಳಗಾಗಿ ನೀಡಿಲ್ಲ. ಇದರಿಂದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ’ ಎಂದು ಪೀಠವು ಕಟು ಮಾತುಗಳಲ್ಲಿ ಹೇಳಿದೆ.

2016–17ನೇ ಅಂದಾಜು ವರ್ಷಕ್ಕೆ ಸಂಬಂಧಿಸಿ, ತನ್ನ ಆದಾಯಕ್ಕೆ ಅನುಗುಣವಾದ ಮೊತ್ತಕ್ಕಿಂತಲೂ ಅಧಿಕ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ಸಂಗ್ರಹಿಸಿದೆ. ಹೆಚ್ಚುವರಿ ತೆರಿಗೆ ಹಣವನ್ನು ಇಲಾಖೆ ಪಾವತಿಸಿಲ್ಲ ಎಂದು ವೊಡಾಫೋನ್‌ ಐಡಿಯಾ ಕಂಪನಿ ಹೈಕೋರ್ಟ್‌ ಮೊರೆ ಹೋಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT