ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ್‌ ಸಮರಿಯಾ ಪ್ರಮಾಣ ವಚನ

Published 6 ನವೆಂಬರ್ 2023, 15:46 IST
Last Updated 6 ನವೆಂಬರ್ 2023, 15:46 IST
ಅಕ್ಷರ ಗಾತ್ರ

ನವದೆಹಲಿ: ಮಾಹಿತಿ ಆಯುಕ್ತ ಹೀರಾಲಾಲ್‌ ಸಮರಿಯಾ (63) ಅವರು ಮುಖ್ಯ ಮಾಹಿತಿ ಆಯುಕ್ತರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರದ ಗೋಪ್ಯತೆ ಬೋಧಿಸಿದರು.

ಮುಖ್ಯ ಮಾಹಿತಿ ಆಯುಕ್ತರಾಗಿದ್ದ ವೈ.ಕೆ. ಸಿನ್ಹಾ ಅವರ ಅಧಿಕಾರಾವಧಿ ಅಕ್ಟೋಬರ್‌ 3ಕ್ಕೆ ಕೊನೆಯಾಗಿತ್ತು. ಅಲ್ಲಿಂದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಈ ಉನ್ನತ ಹುದ್ದೆ ಖಾಲಿಯಿತ್ತು. 

ನಿವೃತ್ತ ಐಎಎಸ್‌ ಅಧಿಕಾರಿಯಾಗಿರುವ ಸಮಾರಿಯಾ ಅವರು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸಿಐಸಿಯ ಮಾಹಿತಿ ಆಯುಕ್ತರಾಗಿ 2020ರ ನವೆಂಬರ್‌ 7ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ಮಾಹಿತಿ ಆಯುಕ್ತರ ಹುದ್ದೆಗಳನ್ನು ಭರ್ತಿಮಾಡಲು ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್‌ ಅಕ್ಟೋಬರ್‌ 30ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. 

ಸಮರಿಯಾ ಅವರು ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡ ಬಳಿಕ, ಒಟ್ಟು ಎಂಟು ಮಾಹಿತಿ ಆಯುಕ್ತರ ಹುದ್ದೆಗಳು ಖಾಲಿಯಿವೆ. ಪ್ರಸ್ತುತ ಆಯೋಗದಲ್ಲಿ ಇಬ್ಬರು ಮಾಹಿತಿ ಆಯುಕ್ತರಿದ್ದಾರೆ.

ಮುಖ್ಯ ಮಾಹಿತಿ ಆಯುಕ್ತರ ನೇತೃತ್ವದಲ್ಲಿ ಆಯೋಗವು ಗರಿಷ್ಠ 10 ಮಾಹಿತಿ ಆಯುಕ್ತರನ್ನು ಹೊಂದಿರಬಹುದು. ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರು 65 ವರ್ಷವಾಗುವಂತೆ ಅಧಿಕಾರದಲ್ಲಿರುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT