ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದ್ಯೋಗಿಗಳ ವಿರುದ್ಧ ಸುಳ್ಳು ದೂರು: ಪ್ರಾಧ್ಯಾಪಕಿಗೆ ₹15 ಲಕ್ಷ ದಂಡ

Published 24 ಫೆಬ್ರುವರಿ 2024, 2:32 IST
Last Updated 24 ಫೆಬ್ರುವರಿ 2024, 2:32 IST
ಅಕ್ಷರ ಗಾತ್ರ

ಪ್ರಯಾಗರಾಜ್‌: ತನ್ನ ಮೂವರು ಸಹೋದ್ಯೋಗಿಗಳ ವಿರುದ್ಧ ಎಸ್‌.ಸಿ. / ಎಸ್‌.ಟಿ. ಕಾಯ್ದೆಯಡಿ ಸುಳ್ಳು ಮೊಕದ್ದಮೆ ದಾಖಲಿಸಿದ ಅಲಹಾಬಾದ್‌ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿಗೆ ಇಲ್ಲಿನ ಹೈಕೋರ್ಟ್‌ ₹15 ಲಕ್ಷ ದಂಡ ವಿಧಿಸಿದೆ. ಅಲ್ಲದೆ ಅರೋಪಿತರ ವಿರುದ್ಧದ ಎಫ್‌ಐಆರ್‌ ಅನ್ನೂ ರದ್ದುಗೊಳಿಸಿದೆ.

ದೂರುದಾರೆ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಕಾನೂನಿನ ಬಗ್ಗೆ ಜ್ಞಾನ ಉಳ್ಳವರಾಗಿದ್ದು, ಸ್ವ ಲಾಭಕ್ಕಾಗಿ ಕಾನೂನಿನ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

‘ಇದು ಕಾನೂನು ಪ್ರಕ್ರಿಯೆಯ ಶುದ್ಧ ದುರುಪಯೋಗದ ಪ್ರಕರಣವಾಗಿದ್ದು, ದೂರುದಾರರು ವಿಭಾಗ ಮುಖ್ಯಸ್ಥರ ವಿರುದ್ಧ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಸುಳ್ಳು ಮತ್ತು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿ, ಅವರನ್ನು ಮತ್ತು ಸಹೋದ್ಯೋಗಿಗಳನ್ನು ಸಿಲುಕಿಸಲು ಪ್ರಯತ್ನಿಸಿದ್ದಾರೆ’ ಎಂದು ನ್ಯಾಯಾಲಯ ಹೇಳಿತು.

‘ಸರಿಯಾಗಿ ಪಾಠ ಮಾಡಿ ಹಾಗೂ ನಿಯಮಿತವಾಗಿ ತರಗತಿಗಳನ್ನು ತೆಗೆದುಕೊಳ್ಳಿ ಎಂದು ಹಿರಿಯ ಸಹೋದ್ಯೋಗಿಗಳು ಅಥವಾ ವಿಭಾಗದ ಮುಖ್ಯಸ್ಥರು ಹೇಳಿದಾಗೆಲ್ಲಾ ಅವರ ವಿರುದ್ಧ ದೂರು ಸಲ್ಲಿಸಲಾಗುತ್ತಿತ್ತು. ಇದು ಮೊದಲನೇ ಪ್ರಕರಣವೇನಲ್ಲ’ ಎಂದು ಕೋರ್ಟ್ ನುಡಿಯಿತು.

ಪ್ರತಿ ಪ್ರಕರಣದಲ್ಲೂ ಪ್ರಾಧ್ಯಾಪಕಿಗೆ ತಲಾ ₹5 ಲಕ್ಷ ದಂಡ ವಿಧಿಸಿ ಕೋರ್ಟ್ ಆದೇಶಿಸಿತು. ‘ಸುಳ್ಳು ದೂರು ದಾಖಲಿಸಿದ್ದರಿಂದ ಸಹೋದ್ಯೋಗಿಗಳ ಖ್ಯಾತಿ ಮತ್ತು ಸಾರ್ವಜನಿಕ ಗೌರವವನ್ನು ಕಳಂಕಗೊಳಿಸಲಾಗಿದೆ. ಅವರು ತಮ್ಮನ್ನು ರಕ್ಷಿಸಲು ಪೊಲೀಸ್‌ ಠಾಣೆಯಿಂದ ಕೋರ್ಟ್‌ಗೆ ಅಲೆಯಬೇಕಾಯಿತು’ ಎಂದು ಕೋರ್ಟ್ ಹೇಳಿದೆ.

ಪ್ರಕರಣವೇನು?

ಮೂವರು ಸಹೋದ್ಯೋಗಿಗಳು ತಮಗೆ ಅವಮಾನ ಮಾಡಿದ್ದಾರೆ. ಬೈಯುವಾಗ ಜಾತಿಯನ್ನು ಪ್ರಸ್ತಾಪಿಸಿದ್ದಾರೆ ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕಿ 2016ರ ಆಗಸ್ಟ್ 4ರಂದು ಎಫ್‌ಐಆರ್ ದಾಖಲಿಸಿದ್ದರು.

ಬಳಿಕ ಆರೋಪಿತರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT