ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ ಪ್ರದೇಶ: ‘ಟೂ ಫಿಂಗರ್ ಟೆಸ್ಟ್‌’ ನಡೆಸಿದ ವೈದ್ಯರಿಗೆ ಹೈಕೋರ್ಟ್‌ ಛೀಮಾರಿ

Published 15 ಜನವರಿ 2024, 14:15 IST
Last Updated 15 ಜನವರಿ 2024, 14:15 IST
ಅಕ್ಷರ ಗಾತ್ರ

ಶಿಮ್ಲಾ: ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಮೇಲೆ ‘ಟೂ ಫಿಂಗರ್ ಟೆಸ್ಟ್‌’ ನಡೆಸಿದ ಪಾಲಂಪುರ ಸಿವಿಲ್ ಆಸ್ಪತ್ರೆಯ ವೈದ್ಯರಿಗೆ ಹಿಮಾಚಲ ಪ್ರದೇಶ ಹೈಕೋರ್ಟ್‌ ಛೀಮಾರಿ ಹಾಕಿದೆ. ತಪ್ಪು ಮಾಡಿರುವ ವೈದ್ಯರಿಂದ ₹5 ಲಕ್ಷ ವಸೂಲಿ ಮಾಡಿ, ಆ ಮೊತ್ತವನ್ನು ಬಾಲಕಿಗೆ ಪರಿಹಾರ ರೂಪದಲ್ಲಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಎಂಎಲ್‌ಸಿ ವರದಿಯು ವ್ಯಕ್ತಿಯ ಘನತೆಯನ್ನು ಕುಗ್ಗಿಸುವಂತೆ ಇದೆ ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಟಿ.ಎಸ್. ಚೌಹಾಣ್ ಮತ್ತು ಸತ್ಯೇನ್ ವೈದ್ಯ ಅವರಿದ್ದ ವಿಭಾಗೀಯ ಪೀಠವು ಬಾಲಕಿಯ ಮೇಲೆ ಈ ಪರೀಕ್ಷೆ ನಡೆಸಿದ ವೈದ್ಯರ ವಿರುದ್ಧ ತನಿಖೆ ನಡೆಸುವಂತೆಯೂ ಸರ್ಕಾರಕ್ಕೆ ಸೂಚನೆ ನೀಡಿದೆ.

ಎಂಎಲ್‌ಸಿ ವರದಿಯಲ್ಲಿ ದೋಷಗಳು ಇವೆ ಎಂಬುದನ್ನು ಆ ವರದಿಯೇ ಹೇಳುತ್ತಿದೆ, ವರದಿಯು ಬಾಲಕಿಯ ಖಾಸಗಿತನದ ಮೇಲೆ ಹಲ್ಲೆ ನಡೆಸಿದಂತೆ ಇದೆ ಎಂದು ಪೀಠವು ಹೇಳಿದೆ. ಅಲ್ಲದೆ, ‘ಟೂ ಫಿಂಗರ್‌ ಟೆಸ್ಟ್‌’ ವಿಧಾನವು ಅತ್ಯಾಚಾರ ಸಂತ್ರಸ್ತರ ಹಕ್ಕುಗಳನ್ನು ಉಲ್ಲಂಘಿಸುವಂತೆ ಇರುತ್ತದೆ ಎಂದು ಹಿಂದೆಯೇ ಹೇಳಲಾಗಿದ್ದರೂ, ಅದೇ ಪರೀಕ್ಷೆಯನ್ನು ಕೈಗೊಂಡಿದ್ದಕ್ಕೆ ವೈದ್ಯರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.

‘ಟೂ ಫಿಂಗರ್ ಟೆಸ್ಟ್‌’ ನಡೆಸುವ ವೈದ್ಯರು ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೀಠವು ಎಚ್ಚರಿಕೆ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT