ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ’

ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ
Last Updated 28 ಸೆಪ್ಟೆಂಬರ್ 2018, 19:48 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಆರು ಸಾವಿರ ರೈಲು ನಿಲ್ದಾಣಗಳು ಇನ್ನೂ ನಾಲ್ಕು ತಿಂಗಳೊಳಗೆ ಉಚಿತ ವೈಫೈ ಸೌಲಭ್ಯ ಹೊಂದಲಿವೆ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೂಗಲ್‌ನಂತಹ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಈಗಾಗಲೇ 711 ರೈಲು ನಿಲ್ದಾಣಗಳು ಉಚಿತ ವೈಫೈ ಸೌಲಭ್ಯ ಒಳಗೊಂಡಿವೆ. ಮುಂದಿನ ನಾಲ್ಕು ತಿಂಗಳಲ್ಲಿ ಉಳಿದ ಎಲ್ಲ ನಿಲ್ದಾಣಗಳಲ್ಲೂ ಈ ಸೌಲಭ್ಯ ಒದಗಿಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಗೂಗಲ್‌ ಕಲ್ಚರಲ್‌ ಇನ್ಸ್‌ಟಿಟ್ಯೂಟ್‌ ಸಹಯೋಗದಲ್ಲಿ ರೂಪಿಸಿರುವ ಭಾರತೀಯ ರೈಲ್ವೆ ಪರಂಪರೆಯ ಡಿಜಿಟಲೀಕರಣಗೊಳಿಸುವ ಮತ್ತು ಆನ್‌ಲೈನ್‌ಲ್ಲಿ ವಿಶ್ವದಾದ್ಯಂತ ವೀಕ್ಷಿಸಲು ಅನುವು ಮಾಡಿಕೊಡುವ ‘ದೇಶದ ಜೀವನಾಡಿ ರೈಲ್ವೆ’ ಯೋಜನೆಯನ್ನು ಶುಕ್ರವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

‘ದೇಶದ ಜೀವನಾಡಿ ರೈಲ್ವೆ’ ಯೋಜನೆಯು ಗೂಗಲ್ ಆರ್ಟ್ಸ್‌ ಅಂಡ್‌ ಕಲ್ಚರಲ್‌ ಆನ್‌ಲೈನ್‌ ತಾಣದಲ್ಲಿ ಭಾರತೀಯ ರೈಲ್ವೆಯ ಪರಂಪರೆ ಪ್ರದರ್ಶಿಸುವ ಉದ್ದೇಶ ಹೊಂದಿದೆ.

‘ಭಾರತೀಯ ರೈಲ್ವೆಯು ಅಸಾಮಾನ್ಯವಾದ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿಯನ್ನು ಹೊಂದಿದೆ. ವೃದ್ಧರು ಮತ್ತು ಯುವಕರಿಗೂ ಸಮಾನವಾಗಿ ಆಕರ್ಷಣೀಯವಾಗಿದೆ. ಇಂದು ಹಲವು ವಿಧಿಗಳಲ್ಲಿ ದೇಶದ ಬೆನ್ನೆಲುಬಾಗಿದೆ’ ಎಂದು ಗೂಗಲ್‌ ಕಲ್ಚರಲ್‌ ಇನ್ಸಿಟಿಟ್ಯೂಟ್‌ ನಿರ್ದೇಶಕ ಅಮಿತ್‌ ಸೂದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT