ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಗುಣಮಟ್ಟ: ಮೌಲ್ಯಮಾಪನ ಪದ್ಧತಿ ಜಾರಿ?

ಎಚ್ಆರ್‌ಡಿ ಸಚಿವಾಲಯದಿಂದ ನೂತನ ಪದ್ಧತಿ
Last Updated 6 ಜನವರಿ 2019, 19:35 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿ ರಾಜ್ಯದಲ್ಲಿನ ಶಾಲಾ ಶಿಕ್ಷಣದ ಗುಣಮಟ್ಟ ತಿಳಿಯಲುಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಮೌಲ್ಯಮಾಪನ ಪದ್ಧತಿಯನ್ನು ಜಾರಿಗೆ ತರಲು ಮುಂದಾಗಿದೆ.

‘70 ಮಾನದಂಡಗಳನ್ನು ಪರಿಗಣಿಸಿ 1,000 ಅಂಕಗಳಿಗೆ ಮೌಲ್ಯಮಾಪನ ಮಾಡಲಾಗುತ್ತದೆ. ಆಯಾ ರಾಜ್ಯಗಳು ಗಳಿಸುವ ಅಂಕಗಳಿಗೆ ಅನುಗುಣವಾಗಿ ನಿಗದಿತ ಶ್ರೇಣಿ ನೀಡಲಾಗುತ್ತದೆ’ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

‌ಈ ಪದ್ಧತಿಯಿಂದ ಆಯಾ ರಾಜ್ಯಗಳಲ್ಲಿನ ಶಿಕ್ಷಣ ಗುಣಮಟ್ಟದ ನೈಜ ಚಿತ್ರಣ ತಿಳಿಯುತ್ತದೆ. ಸಾಧನೆ ಮಾಡಲು ರಾಜ್ಯಗಳ ನಡುವೆಸ್ಪರ್ಧಾ ಮನೋಭಾವ ಮೂಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

‘ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಲು ಸಚಿವಾಲಯ ನಿರ್ಧರಿಸಿದೆ.ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲು ನಿರ್ಧರಿಸಿದರೆ, ಅವರಿಗೆ ಗುಣಮಟ್ಟವುಳ್ಳ ಪುಸ್ತಕಗಳನ್ನು ಕಡಿಮೆ ಬೆಲೆಗೆ ಖರೀದಿಸುವ ಹಕ್ಕಿದೆ. ಇದನ್ನು ಸಾಧ್ಯವಾಗಿಸಲು ಈ ವರ್ಷ 6 ಕೋಟಿ ಪುಸ್ತಕಗಳನ್ನು ಮುದ್ರಿಸುವ ಗುರಿ ಇದೆ.ಎರಡು ವರ್ಷಗಳ ಹಿಂದೆ ಕೇವಲ 2 ಕೋಟಿ ಪುಸ್ತಕಗಳಿದ್ದವು’ ಎಂದು ಜಾವಡೇಕರ್ ತಿಳಿಸಿದ್ದಾರೆ.

**

ದೈಹಿಕ ಶಿಕ್ಷಣ, ಮೌಲ್ಯಯುತ ಶಿಕ್ಷಣ, ಜೀವನಕೌಶಲ ಶಿಕ್ಷಣ ಹಾಗೂ ಪ್ರಾಯೋಗಿಕ ಕಲಿಕೆಗೆ ಸಮಯ ಮೀಸಲಿರಿಸುವಂತೆ ಶಾಲಾ ಪಠ್ಯಕ್ರಮ ಪರಿಷ್ಕರಿಸಲಾಗುತ್ತದೆ.

-ಪ್ರಕಾಶ್ ಜಾವಡೇಕರ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT