ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವಕ್ಕೆ ಅಪಾಯವಿದೆ: ಜಿತೇಂದ್ರ ನಾರಾಯಣ್ ತ್ಯಾಗಿ

Last Updated 1 ಸೆಪ್ಟೆಂಬರ್ 2022, 14:43 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ತಮ್ಮ ಜೀವಕ್ಕೆ ಅಪಾಯವಿರುವುದಾಗಿ ಮತ್ತು ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ತಾವು ಹತ್ಯೆಯಾಗುವ ಭೀತಿ ಇರುವುದಾಗಿ ಹರಿದ್ವಾರ ದ್ವೇಷ ಭಾಷಣ ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿ ಅವರು ಹೇಳಿದ್ದಾರೆ.

ಸೆಪ್ಟೆಂಬರ್‌ 2ರಂದು ಸುಪ್ರೀಂ ಕೋರ್ಟ್‌ಗೆ ಹಾಜರಾಗಲು ತ್ಯಾಗಿ ಅವರಿಗೆ ಸೂಚಿಸಲಾಗಿತ್ತು. ವಿಡಿಯೊ ಸಂದೇಶವೊಂದನ್ನು ಬುಧವಾರ ಹರಿಬಿಟ್ಟಿರುವ ಅವರು, ತಾವು ಜೈಲಿನಲ್ಲಿದ್ದಾಗ ಹರಿದ್ವಾರದ ಜ್ವಾಲಾಪುರದ ಕೆಲವು ದುಷ್ಕರ್ಮಿಗಳು ತಮ್ಮನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆದರೆ ಜೈಲಿನ ನಿಯಮಗಳು ಬಿಗಿಯಾಗಿದ್ದರಿಂದ ಅವರ ಯೋಜನೆಯನ್ನು ಜಾರಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

‘ಸನಾತನ ಧರ್ಮದಲ್ಲಿ ನಂಬಿಕೆ ಇರುವುದರಿಂದ ನನಗೆ ಜೀವದ ಕುರಿತು ಭಯವಿಲ್ಲ. ಕಡೇ ಉಸಿರಿರುವವರೆಗೂ ನಾನು ಸನಾತನ ಧರ್ಮಕ್ಕಾಗಿ ಹೋರಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ತಮ್ಮ ವಿರುದ್ಧ ಸಂಚು ರೂಪಿಸಲಾಗಿದೆ ಎಂದಿರುವ ಅವರು, ‘ನಾನು ಮಾಡದಿರುವ ತಪ್ಪಿಗಾಗಿ ನನ್ನ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಮುಲ್ಲಾಗಳು ರೂಪಿಸಿರುವ ಸಂಚಿನ ಸಂತ್ರಸ್ತ ನಾನು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT