ಮುಂಬೈ: ರಾಜ್ಯಕ್ಕೆ ಮತ್ತು ಜನರಿಗೆ ಒಳ್ಳೆಯದನ್ನು ಮಾಡು ಎಂದು ಉಪ ಮುಖ್ಯಮಂತ್ರಿ, ಹಣಕಾಸು ಸಚಿವ ಅಜಿತ್ ಪವಾರ್‌ಗೆ ಹೇಳಿರುವೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರ್ಕಾರಕ್ಕೆ ಸೇರಿದ ನಂತರ ಇದೇ ಮೊದಲ ಸಲ ಸಚಿವ ಅಜಿತ್ ಪವಾರ್ ಅವರನ್ನು ಉದ್ಧವ್ ಠಾಕ್ರೆ ಬುಧವಾರ ಭೇಟಿ ಮಾಡಿದರು. ಸುಮಾರು 2 ತಾಸುಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್, ‘ರಾಜ್ಯಕ್ಕೆ ಮತ್ತು ಜನರಿಗೆ ಒಳ್ಳೆಯದನ್ನು ಮಾಡು’ ಎಂದು ಅಜಿತ್ ಅವರಿಗೆ ನಾನು ಕೇಳಿದೆ ಎಂದು ಹೇಳಿದರು.
ಅಜಿತ್ ಬಳಿ ರಾಜ್ಯದ ಖಜಾನೆಯ ಬೀಗದ ಕೈ ಇರುವುದರಿಂದ ಅವರು ರಾಜ್ಯ ಮತ್ತು ಜನರಿಗೆ ಸಹಾಯ ಮಾಡುವರು ಎನ್ನುವ ವಿಶ್ವಾಸವಿದೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.