ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IAF ತರಬೇತಿ ವಿಮಾನ ಪಶ್ಚಿಮ ಬಂಗಾಳದಲ್ಲಿ ಪತನ: ಪೈಲಟ್‌ಗಳು ಸುರಕ್ಷಿತ

Published 13 ಫೆಬ್ರುವರಿ 2024, 14:58 IST
Last Updated 13 ಫೆಬ್ರುವರಿ 2024, 15:03 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತೀಯ ವಾಯು ಸೇನೆಯ ತರಬೇತಿ ವಿಮಾನವು ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ಕಲೈಕುಂಡ ಬಳಿ ಮಂಗಳವಾರ ಪತನಗೊಂಡಿದೆ.

ತರಬೇತಿಯಲ್ಲಿದ್ದ ಪೈಲಟ್‌ಗಳು, ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಪತನಗೊಳ್ಳುವ ಮೊದಲೇ ಪೈಲಟ್‌ಗಳು ಅದರಿಂದ ಸುರಕ್ಷಿತವಾಗಿ ಹೊರ ಜಿಗಿದಿದ್ದಾರೆ.

ತರಬೇತಿ ಮುಗಿಸಿ ಕಲೈಕುಂಡ ವಾಯು ನೆಲೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ವಾಯು ನೆಲೆ ಪಕ್ಕದ ಜಾಗದಲ್ಲಿ ವಿಮಾನ ಪತಗೊಂಡಿದೆ. 

ಇದರ ಮಾಹಿತಿ ಪಡೆದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT