ಪ್ರಯಾಗ್ರಾಜ್: ಇಲ್ಲಿನ ಜಾರ್ಜ್ ಟೌನ್ ಪ್ರದೇಶದಲ್ಲಿರುವ ಕೆಪಿ ಕಾಲೇಜು ಮೈದಾನದ ಸಮೀಪ ಭಾರತೀಯ ವಾಯುಪಡೆಗೆ ಸೇರಿದ ತರಬೇತಿ ವಿಮಾನ ಕೊಳಕ್ಕೆ ಅಪ್ಪಳಿಸಿ ಪತನಗೊಂಡಿರುವ ಕುರಿತು ವರದಿಯಾಗಿದೆ.

ವಿಮಾನದಲ್ಲಿದ್ದ ಪೈಲಟ್ ಸುರಕ್ಷಿತವಾಗಿ ಹೊರ ಹೊರಬಂದಿದ್ದಾರೆ. ಯಾವುದೇ ಸಾವುನೋವುಗಳು ಅಥವಾ ನಾಗರಿಕ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಉಪ ಪೊಲೀಸ್ ಆಯುಕ್ತ (ನಗರ) ಮನೀಶ್ ಶಾಂಡಿಲ್ಯ ಪಿಟಿಐಗೆ ತಿಳಿಸಿದ್ದಾರೆ.

ತರಬೇತಿ ವಿಮಾನದ ಎಂಜಿನ್ನಲ್ಲಿ ಹಠಾತ್ ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ, ಅದು ಪತನಗೊಂಡಿತು ಎಂದು ಅವರು ಹೇಳಿದರು.
.ಅಮೆರಿಕದಲ್ಲಿ ‘ಎಫ್–35’ ಯುದ್ಧ ವಿಮಾನ ಪತನ: ಪೈಲಟ್ ಪ್ರಾಣಾಪಾಯದಿಂದ ಪಾರು.Russia Plane Crash | ರಷ್ಯಾದ ವಿಮಾನ ಪತನ: ಐವರು ಮಕ್ಕಳು ಸೇರಿ 49 ಮಂದಿ ಸಾವು.
‘ಇಂದು (ಬುಧವಾರ) ಮಧ್ಯಾಹ್ನ 12:15ರ ಸುಮಾರಿಗೆ ಪ್ರಯಾಗ್ರಾಜ್ ಬಳಿಯ ಬಾಮ್ರೌಲಿ ವಾಯುಪಡೆ ನಿಲ್ದಾಣದ ಬಳಿ ನಿಯಮಿತ ಹಾರಾಟ ನಡೆಸುತ್ತಿದ್ದ ಐಎಎಫ್ನ ಮೈಕ್ರೋಲೈಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಬಳಿಕ, ಇದನ್ನು ಜನವಸತಿ ಇಲ್ಲದ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು’.

‘ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಸುರಕ್ಷಿತವಾಗಿದ್ದಾರೆ. ವಿಮಾನ ಪತನಕ್ಕೆ ಕಾರಣ ಕಂಡುಕೊಳ್ಳಲು ಐಎಎಫ್ ತನಿಖಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ’ ಎಂದು ಐಎಎಫ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.