ಹೆಲಿಕಾಪ್ಟರ್ನ ತರಬೇತಿ ಹಾರಾಟದ ವೇಳೆ ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಟೇಕ್ ಆಫ್ ಆದ ತಕ್ಷಣ ಪತನವಾಗಿದ್ದರಿಂದ ಅದರಲ್ಲಿದ್ದವರಿಗೆ ಹೆಚ್ಚಿನ ಅಪಾಯ ಉಂಟಾಗಲಿಲ್ಲ. ರನ್ವೇ ಬಳಿ ಈ ಘಟನೆ ನಡೆದ ಕಾರಣ ವಿಮಾನ ನಿಲ್ದಾಣವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಚ್ಚಲಾಗಿತ್ತು. ಇಲ್ಲಿಗೆ ಬರಬೇಕಿದ್ದ ವಿಮಾನಗಳಿಗೆ ಮಾರ್ಗ ಬದಲಿಸಿ ಸಮೀಪದ ಇತರ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ವ್ಯವಸ್ಥೆ ಮಾಡಲಾಯಿತು.