ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆಲಸದಾಕೆ ಖಾತೆಗೆ ₹ 75 ಲಕ್ಷ

ಬೇನಾಮಿ ಹೆಸರಿನಲ್ಲಿ ಆಸ್ತಿ; ನಿವೃತ್ತ ಅಧಿಕಾರಿ ಆರೋಪಿ
Last Updated 29 ಮೇ 2019, 16:05 IST
ಅಕ್ಷರ ಗಾತ್ರ

ನವದೆಹಲಿ: ಮನೆಗೆಲಸ ಮಾಡುತ್ತಿದ್ದ ಮಹಿಳೆಯ ಬ್ಯಾಂಕ್‌ ಖಾತೆಯಲ್ಲಿ ₹ 75 ಲಕ್ಷ ಜಮೆಯಾಗಿದ್ದು, ಇದರ ಹಿಂದೆ ಅಧಿಕಾರಿ ಇದ್ದಾರೆ ಎಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಬುಧವಾರ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದು, ಚೆನ್ನೈನಲ್ಲಿರುವ ಪೆಟ್ರೊಲಿಯಂ ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪೆಸೊ) ನಿವೃತ್ತ ಜಂಟಿ ಮುಖ್ಯಸ್ಥ ಎ.ಕೆ.ಯಾದವ್‌ ಮತ್ತು ಇವರ ಮನೆಗೆಲಸ ಮಾಡುತ್ತಿದ್ದ ಸರಿತಾ ಎಂಬವರು ಆರೋಪಿಗಳಾಗಿದ್ದಾರೆ.

ಆರೋಪಿ ಸರಿತಾ ಖಾತೆಯಲ್ಲಿ ಈ ಮೊದಲು ಕೇವಲ ₹ 700 ಇತ್ತು. 32 ತಿಂಗಳಲ್ಲಿ ಆದಾಯಕ್ಕಿಂತ 311 ಪಟ್ಟು ಹಣ ಜಮೆಯಾಗಿದೆ. ಈಕೆಗೆ ಮನೆಗೆಲಸದಿಂದ ಬರುವ ವಾರ್ಷಿಕ ಆದಾಯ ₹ 2.66 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾದವ್‌ 2015–18ರ ಅವಧಿಯಲ್ಲಿ ₹ 1.37 ಕೋಟಿ ಹಣ ಗಳಿಸಿದ್ದಾರೆ.ಖರ್ಚು ಕಳೆದರೂ ಆದಾಯಕ್ಕಿಂತ₹ 98.89 ಲಕ್ಷ ಹೆಚ್ಚುವರಿ ಇವರಿಬ್ಬರ ಖಾತೆಯಲ್ಲಿದೆ. ಈಹಣದ ಜಮೆಯಲ್ಲಿ ಟಿ.ವಿ.ಕೆ. ಕುಮಾರೇಶನ್‌ ಎಂಬ ಮಧ್ಯವರ್ತಿ ಕೈವಾಡ ಇದ್ದು, ಈತನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.‌

ಸರಿತಾ ಹೆಸರಿನಲ್ಲಿ ₹ 30 ಲಕ್ಷ ಮೌಲ್ಯದ ಎರಡು ನಿವೇಶನ, ₹ 36 ಲಕ್ಷ ಮೌಲ್ಯದ ಮನೆ, 547 ಗ್ರಾಂ. ಚಿನ್ನ, ₹ 6.7 ಲಕ್ಷ ನಗದು, ₹ 65 ಸಾವಿರ ಮೌಲ್ಯದ ಸ್ಕೂಟರ್‌ ಇದ್ದು, ಯಾದವ್ ಬೇನಾಮಿ ಆಸ್ತಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT